Untitled Document
Sign Up | Login    
Dynamic website and Portals
  
May 16, 2016

ಇಸ್ರೋದಿಂದ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಿದ್ಧತೆ: ಆರ್​ಎಲ್​ವಿ-ಟಿಡಿ ರಾಕೆಟ್ ಉಡ್ಡಯನಕ್ಕೆ ತಯಾರಿ

ಬೆಂಗಳೂರು : ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ) ಇದೇ ಮೊದಲ ಬಾರಿಗೆ ರೆಕ್ಕೆ ಹೊಂದಿದ ರಾಕೆಟ್ ಉಡಾಯಿಸಲು ಮುಂದಾಗಿದ್ದು, ಈ ಮೂಲಕ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಜ್ಜಾಗಿದೆ.

ಮೇಕ್ ಇನ್ ಇಂಡಿಯಾ ಪ್ರಯತ್ನದೊಂದಿಗೆ ನಿರ್ಮಿಸಲಾಗಿರುವ ಬಾಹ್ಯಾಕಾಶ ರಾಕೆಟ್ ಮೊದಲ ಯಾನಕ್ಕೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಬಹುತೇಕ ಕ್ರೀಡಾ ಬಳಕೆಯ ವಾಹನದ (ಎಸ್​ಯುವಿ) ಗಾತ್ರ ಮತ್ತು ತೂಕವುಳ್ಳ ನುಣುಪಾದ ಹೊಳಪಿನ ರೆಕ್ಕೆ ಹೊಂದಿದ ಬಾಹ್ಯಾಕಾಶ ನೌಕೆಗೆ ಅಂತಿಮ ರೂಪ ನೀಡಲಾಯಿತು.

ಹೀಗೆ ವಿನ್ಯಾಸಗೊಂಡಿರುವ ಮರುಬಳಕೆ ಮಾಡಬಹುದಾದ ದೇಶೀ ಬಾಹ್ಯಾಕಾಶ ರಾಕೆಟ್ ಪ್ರಯೋಗ ಯಶಸ್ವಿಯಾದಲ್ಲಿ ವೆಚ್ಚವನ್ನು ಹತ್ತು ಪಟ್ಟು ತಗ್ಗಿಸಬಹುದು ಎಂಬುದು ಇಸ್ರೋ ವಿಜ್ಞಾನಿಗಳ ವಿಶ್ವಾಸ. ಇದರಿಂದಾಗಿ ಪ್ರತಿ ಕೆಜಿಯಲ್ಲಿ 2ಸಾವಿರ ಡಾಲರ್ ನಷ್ಟು ಹಣವನ್ನು ಕಡಿಮೆ ಮಾಡಬಹುದಾಗಿದೆ. ಈ ತಿಂಗಳಾಂತ್ಯದಲ್ಲಿ ರಾಕೆಟ್ ಉಡ್ಡಯನವಾಗುವ ಸಾಧ್ಯತೆಯಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂಗಾರು ಆಗಮನಕ್ಕೆ ಮುನ್ನವೇ ಭಾರತದ ದೇಶೀ ವಿನ್ಯಾಸದ ಮರುಬಳಕೆ ಉಡಾವಣಾ ವಾಹನ ತಂತ್ರಜ್ಞಾನ ಪ್ರಯೋಗ ಪ್ರದರ್ಶಕವು (ಆರ್​ಎಲ್​ವಿ -ಟಿಡಿ) ಗಗನಕ್ಕೆ ಏರುವುದಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಂದರು ಸಾಕ್ಷಿಯಾಗಲಿದೆ. ಡೆಲ್ಟಾ ರೆಕ್ಕೆಗಳುಳ್ಳ ಈ ರಾಕೆಟ್ ಉಡಾವಣೆ ಬಳಿಕ ಮರಳಿ ಬಂಗಾಳ ಕೊಲ್ಲಿಯಲ್ಲಿ ಬಂದಿಳಿಯಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited