Untitled Document
Sign Up | Login    
Dynamic website and Portals
  
May 19, 2016

ಪೀಠಾರೋಹಣದ ವಾರ್ಷಿಕೋತ್ಸವದ ದಿನವನ್ನು 'ಜೀವಸೇವಾ ಸಂಕಲ್ಪದಿನ'ವಾಗಿ ಆಚರಿಸಿರಿಃ ರಾಘವೇಶ್ವರ ಶ್ರೀ

ಪೀಠಾರೋಹಣದ ವಾರ್ಷಿಕೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಪೀಠಾರೋಹಣದ ವಾರ್ಷಿಕೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

ಬೆಂಗಳೂರು : ಸಮಾಜಮುಖಿಯಾದ ಸೇವಾಯೋಜನೆಗಳ ಉದ್ಘೋಷಣೆಯ ಮೂಲಕ ನಮ್ಮನ್ನು ನಾವು ಸಮಾಜಕ್ಕೆ ಅರ್ಪಿಸಿಕೊಂಡ ಪೀಠಾರೋಹಣವಾರ್ಷಿಕೋತ್ಸವದ ಈ ದಿನವನ್ನು “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ ಎಂದು ಶ್ರೀ ರಾಮಚಂದ್ರಾಪುರಮಠಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.

ಗಿರಿನಗರಶ್ರೀ ರಾಮಾಶ್ರಮದಲ್ಲಿ ಪೀಠಾರೋಹಣವಾರ್ಷಿಕೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು. ಈ ದಿನವನ್ನು ಯಾವ ರೀತಿ ಆಚರಿಸಬೇಕು ಎಂಬ ಭಕ್ತರ ಪ್ರಶ್ನೆಗೆ ಉತ್ತರಿಸಿದ ಪೂಜ್ಯ ಶ್ರೀಗಳು, ಅಂದು ನಾವು ಪೀಠಾರೋಹಣ ಮಾಡಿದಾಗ ಶ್ರೀ ಶಂಕರಾಚಾರ್ಯರ ನೆನಪಿನಲ್ಲಿ ವಿದ್ಯಾಯೋಜನೆಗಳು, ಶ್ರೀರಾಮನ ಹೆಸರಿನಲ್ಲಿ ಸೇವಾ ಯೋಜನೆಗಳನ್ನು ಸಂಕಲ್ಪಿಸುವುದರ ಮೂಲಕ ಸಮಾಜದ ಉನ್ನತಿಗೆ ಸಂಕಲ್ಪಿಸಿ ನಮ್ಮನ್ನು ನಾವು ತೊಡಗಿಸಿಕೊಂಡೆವು. ಹಾಗೆಯೇ ನಮ್ಮ ಶಿಷ್ಯಭಕ್ತರು, ಸಮಾಜಕ್ಕೆ ಸಹಕಾರಿಯಾಗುವ, ಜೀವಜಗತ್ತಿಗೆ ಉಪಕಾರಿಯಾಗುವ ಯಾವುದಾದರೂ ಒಳ್ಳೆಯ ಕಾರ್ಯದೋಂದಿಗೆ ಈ ದಿನವನ್ನು 'ಜೀವಸೇವಾ ಸಂಕಲ್ಪದಿನ' ಆಚರಿಸಿರಿ, ಗುರುಸ್ಮರಣೆಯೊಂದಿಗೆ ಜೀವಜಗತ್ತಿನ ಹಿತಕಾಯುವ ಸೇವೆಮಾಡಲು ಯಾವುದೇ ಆಡಂಬರದ ಅವಶ್ಯಕತೆ ಇಲ್ಲ, ಸರಳವಾಗಿ ಆಚರಿಸಿ ಆದರೆ ಈ “ಜೀವಸೇವಾ ಸಂಕಲ್ಪದಿನ” ಅರ್ಥಪೂರ್ಣವಾಗಿರಲಿ ಎಂದು ಆಶಂಸಿಸಿದರು.

ಪ್ರಾಸ್ತಾವಿಕ ಮಾತನಾಡಿದ ವಿದ್ವಾನ್ ಜಗದೀಶ್ ಶರ್ಮಾ ಅವರು, ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಪ್ರಮಾಥಿನಾಮ ಅವರು ಸಂವತ್ಸರದ ವೈಶಾಖ ಶುದ್ಧ ತ್ರಯೋದಶಿಯಂದು(28/04/1999) ಪೀಠಾರೋಹಣವನ್ನುಮಾಡಿ, ಅಂದಿನಿಂದ ಇಂದಿನವರೆಗೆ ಅವಿಶ್ರಾಂತವಾಗಿ ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಗೋಸಂರಕ್ಷಣೆಯ ಸಂಕಲ್ಪದ ಕಾಮದುಘಾ, ಮುಷ್ಟಿಭಿಕ್ಷಾ, ಜೀವನದಾನ, ಆರ್ತತ್ರಾಣ ನಿಧಿ, ಗ್ರಾಮರಾಜ್ಯ, ವನಜೀವನಯಜ್ನದಂತಹ ಹತ್ತು ಹಲವು ಯೋಜನೆಗಳ ಮೂಲಕ ಜೀವಜಗತ್ತಿನ ಹಿತಕಾಯುವ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಚಿಂಚನೂರು ಮಹಾಭಲೇಶ್ವರ ಅವರು ಶ್ರೀಗಳು ಸೂಚಿಸಿದ ಜೀವಸೇವಾ ಸಂಕಲ್ಪದ ನಿಮಿತ್ತ ಬರಪೀಡಿತ ಕಲಬುರ್ಗಿಯ ಪಾಣೇಗಾವ್ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿಸಿದರು. ಶ್ರೀಮಠದ ಮುಖ್ಯಕಾರ್ಯನಿರ್ವಹಣಾದಿಕಾರಿಗಳಾದ ಶ್ರೀ ಕೆ,ಜಿ ಭಟ್, ಶ್ರೀಸಂಸ್ಥಾನದ ಎಲ್ಲಾ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗು ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited