ವಾಷಿಂಗ್ಟನ್ : ಭಾರತಕ್ಕೆ ನ್ಯಾಟೋ ಮೈತ್ರೀಕೂಟದಲ್ಲಿ ಸ್ಥಾನ ನೀಡುವ ನಿರ್ಧಾರಕ್ಕೆ ವೈಟ್ ಹೌಸ್ ಅನುಮೋದನೆ ನೀಡಿದೆ.ರಕ್ಷಣಾ ಮಸೂದೆಯಯಲ್ಲಿ ಭಾರತಕ್ಕೆ ನ್ಯಾಟೋ (ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಮಿತ್ರ ಸ್ಥಾನಮಾನ ನೀಡುವಂತೆ ಕೋರುವ ತಿದ್ದುಪಡಿಗಳಿಗೆ ಅಮೆರಿಕದ ಪ್ರಜಾಪ್ರನಿಧಿಗಳು ಸಮ್ಮತಿ ನೀಡಿದ್ದಾರೆ.
ಇದರಿಂದಾಗಿ ರಕ್ಷಣಾ ಉಪಕರಣ ಮಾರಾಟ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ನ್ಯಾಟೋ ಮಿತ್ರರಿಗೆ ಸಮನಾದ ಸ್ಥಾನಮಾನ ಭಾರತಕ್ಕೆ ಲಭಿಸಲಿದೆ.
2017ರ ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆಯ (ಎನ್ಡಿಎಎ) ಅನುಮೋದನೆಯು ಭಾರತ ಉಪಖಂಡ ಮತ್ತು ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಬೀಜಿಂಗ್ನ ವಿಸ್ತರಣಾ ಯತ್ನಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಆಮೆರಿಕ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ 450 ಮಿಲಿಯನ್ ಡಾಲರ್ ನೆರವನ್ನು ಕೆಲವೊಂದು ಷರತ್ತುಗಳನ್ನು ಪೂರೈಸದೇ ಇದ್ದರೆ ತತ್ ಕ್ಷಣವೇ ತಡೆ ಹಿಡಿಯುವ ತಿದ್ದುಪಡಿಗೂ ಅಮೆರಿಕದ ವೈಟ್ ಹೌಸ್ ಅನುಮೋದನೆ ನೀಡಿದೆ.