Untitled Document
Sign Up | Login    
Dynamic website and Portals
  
September 5, 2016

ಜಿ-20ಶೃಂಗಸಭೆ: ಭ್ರಷ್ಟಾಚಾರ. ಕಪ್ಪುಹಣ, ತೆರಿಗೆ ವಂಚನೆ ಬಗ್ಗೆ ಪ್ರಧಾನಿ ಪ್ರಸ್ತಾಪ

ಜಿ-20ಶೃಂಗಸಭೆ: ಭ್ರಷ್ಟಾಚಾರ. ಕಪ್ಪುಹಣ, ತೆರಿಗೆ ವಂಚನೆ ಬಗ್ಗೆ ಪ್ರಧಾನಿ ಪ್ರಸ್ತಾಪ

ಹಂಗ್ ಝೌ : ಭ್ರಷ್ಟಾಚಾರ, ಕಪ್ಪುಹಣ, ತೆರಿಗೆ ವಂಚನೆ ವಿರುದ್ಧ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಉತ್ತಮ ಅರ್ಥವ್ಯವಸ್ಥೆಯ ಆಡಳಿತ ನೀಡಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಚೀನಾಹಂಗ್ ಝೌನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಠಿಣ ಅಂತರಾಷ್ಟ್ರೀಯ ನಿಯಮ ಹಾಗೂ ಅತಿಯಾದ ಬ್ಯಾಂಕಿಗ್ ಗೌಪ್ಯತೆ ಭ್ರಷ್ಟಾಚಾರವನ್ನು ಮುಚ್ಚಿಹಾಕುತ್ತದೆ ಎಂದು ಅಭಿಪ್ರಾಯಪಟ್ಟರು.

ತೆರಿಗೆ ವಂಚನೆ, ಕಪ್ಪುಹಣ, ಭ್ರಷ್ಟಾಚಾರ ನಿಗ್ರಹಕ್ಕೆ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಡಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾದ ಆರ್ಥಿಕ ಆಡಳಿತ ನೀಡಲು ಸಾಧ್ಯ ಎಂದರು.ಜಾಗತಿಕ ಅರ್ಥವ್ಯವಸ್ಥೆಗೆ ವೇಗದ ಪ್ರಗತಿ ತರಬೇಕಾದರೆ ರಚನಾತ್ಮಕ ಸುಧಾರಣಾ ಕ್ರಮಗಳ ಕಾರ್ಯಸೂಚಿ ಜಾರಿಗೆ ತರಲು ಜಿ-20 ರಾಷ್ಟ್ರಗಳ ಗಮನಹರಿಸಬೇಕು ಎಂದು ತಿಳಿಸಿದರು.

ಜಿ-20 ಶೃಂಗಸಭೆಯಲ್ಲಿ ಪ್ರಬಲ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ 20 ರಾಷ್ಟ್ರಗಳಾದ ಆಸ್ಟ್ರೇಲಿಯಾ, ಅಮೆರಿಕ, ಅರ್ಜೆಂಟೀನ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯ, ಸೌದಿಅರೆಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಗ್ರೇಟ್ ಬ್ರಿಟನ್ ದೇಶಗಳು ಪಾಲ್ಗೊಂಡಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited