Untitled Document
Sign Up | Login    
Dynamic website and Portals
  
September 10, 2016

ಕಾವೇರಿ ವಿವಾದ ಪ್ರತಿಭಟನೆ: ಅಹಿತಕರ ಘಟನೆ ತಪ್ಪಿಸಲು ಲಘು ಲಾಠಿ ಪ್ರಹಾರ- ಪರಮೇಶ್ವರ್

G.Parameshwar  (File Pic) G.Parameshwar (File Pic)

ತುಮಕೂರು : ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕೆಲ ಹೋರಾಟಗಾರರು ಕೆಆರ್‍ಎಸ್ ಡ್ಯಾಮ್ ಗೇಟ್‍ಗಳನ್ನು ಬಂದ್ ಮಾಡಲು ಯತ್ನಿಸಿದರಲ್ಲದೆ ಅಣೆಕಟ್ಟೆಗೆ ಹಾರಲು ಪ್ರಯತ್ನಿಸಿದರು. ಹಾಗಾಗಿ ಆಗಬಹುದಾದ ಅನಾಹುತನವನ್ನು ತಡೆಯುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಮಾಡದಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು. ಆದರೆ ಕೆಲವು ಪ್ರತಿಭಟನಾಕಾರರು ಡ್ಯಾಮ್‍ ಗೆ ಹಾರಲು ಪ್ರಯತ್ನಿಸಿದ್ದರು. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಅವರನ್ನು ತಡೆಯಲು ಲಘು ಲಾಠಿ ಪ್ರಹಾರ ಮಾಡಲಾಗಿದೆ ಎಂದು ತಿಳಿಸಿದರು.

ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಪರ ವಕಾಲತು ನಡೆಸುತ್ತಿರುವ ಫಾಲಿ ನಾರಿಮನ್‍ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಅವರನ್ನು ಬದಲಾವಣೆ ಮಾಡಬೇಕೆಂದು ಹಿಂದೆ ಸಿದ್ದರಾಮಯ್ಯನವರು ಒತ್ತಾಯ ಮಾಡಿದ್ದು ನಿಜ. ಆದರೆ ನಾರಿಮನ್ ಅಸಮರ್ಥರೆಂದು ಬದಲಾವಣೆ ಮಾಡುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited