Untitled Document
Sign Up | Login    
Dynamic website and Portals
  

Bangalore News

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ

ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.... More »

ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ

ನಗರದ ರಸ್ತೆ ಗುಂಡಿಗಳನ್ನು 10 ದಿನದೊಳಗೆ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.More »

ಬೆಂಗಳೂರಿನ ಶ್ರೀ ರಾಮಚಂದ್ರಾಪುರ ಮಠದಲ್ಲಿ ವಿಶಿಷ್ಟ ಗೋ-ಗಣಪತಿ

ಗೋಗಣಪತಿ ನಿರ್ಮಾಣದಲ್ಲಿ ತೊಡಗಿರುವ ಅಶೋಕ್ ಸಿದ್ದಿನಕೈ

ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಗೋಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಸಂಪನ್ನವಾಗಲಿದ್ದು, ವಿಶಿಷ್ಟವಾದ ‘ಗೋ-ಗಣಪತಿ’ಯ ಉಪಾಸನೆ ನಡೆಯಲಿದೆ.More »

ಬೆಂಗಳೂರಿನಲ್ಲಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವವನ್ನು ಜುಲೈ 8 ಮತ್ತು ಜುಲೈ 15 ರಂದು ಆಯೋಜಿಸಿದೆMore »

ವಿಶ್ವ ಯೋಗ ದಿನಾಚರಣೆ: ಉಪ - ಯೋಗದ ಉಪಯೋಗ ಪಡೆಯಿರಿ: ಡಾ ಶಾಲಿನಿ ರಜನೀಶ್

ವಿಶ್ವ ಯೋಗ ದಿನಾಚರಣೆಯ ಮುನ್ನವೇ, ಉಪ ಯೋಗದ ಉಪಯೋಗವನ್ನು ಪಡೆಯಿರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಬೆಂಗಳೂರಿನ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.More »

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಕಬ್ಬನ್ ಪಾರ್ಕ್‍ನಲ್ಲಿ ಜೂನ್ 19 ರಂದು ಪೂರ್ವಭಾವಿ ಯೋಗ ಕಾರ್ಯಕ್ರಮ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂನ್ 19 ರಂದು ಆಯುಷ್ ಇಲಾಖೆಯು ಈಶಾ ಫೌಂಡೇಶನ್ ಕೊಯಬಂತ್ತೂರು ಇವರ ಸಹಭಾಗಿತ್ವದಲ್ಲಿ “ಉಪ-ಯೋಗ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದೆ.More »

ಮೇ 31 ರಿಂದ ಲಾಲ್ ಬಾಗ್ ನಲ್ಲಿ ಮಾವು ಮತ್ತು ಹಲಸು ಮೇಳ

ಮೇ 31 ರಿಂದ ಒಂದು ತಿಂಗಳ ಕಾಲ ಅಂದರೆ ಜೂನ್ 29ರವರೆಗೆ ಲಾಲ್ ಬಾಗ್ ನಲ್ಲಿ ಮಾವು ಮತ್ತು ಹಲಸು ಮೇಳMore »

ಸಪ್ತಗಿರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿದ 12 ಅಡಿ ಉದ್ದದ ಬೈಕ್

ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಧುನಿಕ ಮೋಟಾರ್ ಬೈಕ್ ಸಿದ್ಧಪಡಿಸಿದ್ದಪಡಿಸಿದ್ದು, ಅದರ ವಿಶೇಷ ಲಕ್ಷಣಗಳು ಆಟೊಮೊಬೈಲ್ ಎಂಜಿನಿಯರಿಂಗ್ ಕ್ಷೇತ್ರದ ಪರಿಣಿತರನ್ನೇ ಬೆರಗುಗೊಳಿಸಿದೆ.More »

ನಮ್ಮ ಮೆಟ್ರೋ: ಪೂರ್ವ-ಪಶ್ಚಿಮ ಕಾರಿಡಾರ್‌ ಸುರಂಗ ಮಾರ್ಗಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ ನ ಮೊದಲ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.More »

ನಮ್ಮ ಮೆಟ್ರೋ: ಪೂರ್ವ-ಪಶ್ಚಿಮ ಕಾರಿಡಾರ್‌ ನ ಮೊದಲ ಸುರಂಗ ಮಾರ್ಗ ಚಾಲನೆಗೆ ಕ್ಷಣಗಣನೆ

ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ ನ ಮೊದಲ ಸುರಂಗ ಮಾರ್ಗ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.More »

ಶ್ರೀ ರಾಮಚಂದ್ರಾಪುರ ಮಠದ 'ಕಲಾಮುಕುಲ' ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಭರತನಾಟ್ಯ ಕಾರ್ಯಕ್ರಮ

ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ ಅವರಿಂದ ಭರತನಾಟ್ಯ

ಶ್ರೀ ರಾಮಚಂದ್ರಾಪುರ ಮಠದ 'ಕಲಾಮುಕುಲ' ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ, ಗಿರಿನಗರದ ಶ್ರೀರಾಮಾಶ್ರಮದಲ್ಲಿ ಬುಧವಾರ ಭರತನಾಟ್ಯ ಕಾರ್ಯಕ್ರಮ ಸಂಪನ್ನವಾಯಿತು.More »

ವೈಭವದಿಂದ ನಡೆದ ಬೆಂಗಳೂರು ಕರಗ ಮಹೋತ್ಸವ

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ವೈಭವದಿಂದ ಜರುಗಿತು.More »

ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ

ಬಿಬಿಎಂಪಿ ಆಯುಕ್ತರಾಗಿದ್ದ ಜಿ.ಕುಮಾರ ನಾಯ್ಕ್ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.More »

ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ

ಕರಗ ಮಹೋತ್ಸವಕ್ಕೆ ಸಜ್ಜುಗೊಂಡ ಧರ್ಮರಾಯನ ದೇವಸ್ಥಾನ (ಫೈಲ್ ಚಿತ್ರ)

ಐತಿಹಾಸಿಕ ಹೂವಿನ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚೈತ್ರ ಪೂರ್ಣಿಮೆ ಶುಕ್ರವಾರ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಬೆಂಗಳೂರು ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯನ ದೇವಸ್ಥಾನದಿಂದ ಹೂವಿನ ಕರಗ ಹೊರಡಲಿದೆ.More »

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆವರೆಗೆ ಸುರಂಗ ಮೆಟ್ರೋಗೆ ಚಾಲನೆ

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.More »

ಸಂಗೀತ ಗುರು ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಗಳ ಸ್ಮರಣೋತ್ಸವಃ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಬೆಂಗಳೂರಿನ ಪ್ರತಿಷ್ಠಿತ ಸಂಗೀತ ಸಂಸ್ಥೆಗಳಲ್ಲೊಂದಾದ 'ಸಂಗೀತ ಕೃಪಾ ಕುಟೀರ'ವು 'ಸ್ಮರಣೋತ್ಸವ' ವಿಶೇಷ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.More »

ಯೋಗಗುರು ಬಾಬಾ ರಾಮದೇವ್ ಅವರಿಂದ ಬೆಂಗಳೂರಿನಲ್ಲಿ ಉಚಿತ ಯೋಗ ಶಿಬಿರ

ಯೋಗಗುರು ಬಾಬಾ ರಾಮದೇವ್ ಮಾ. 19ರಿಂದ 23ರವರೆಗೆ ಬೆಂಗಳೂರಿನಲ್ಲಿ ಉಚಿತ ಯೋಗ ಶಿಬಿರ ನಡೆಸಲಿದ್ದಾರೆMore »

ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳ ಸಾವು

ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳ ಸಾವು

ಬೆಂಗಳೂರಿನ ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಆಮ್ಲಜನಕದ ಕೊರತೆಯಿಂದ ಮೀನುಗಳು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.More »

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶಿವರಾತ್ರಿ ಕಾರ್ಯಕ್ರಮ

ಶಿವರಾತ್ರಿ ಪರ್ವದ ಪ್ರಯುಕ್ತ ಶ್ರೀ ರಾಮಚಂದ್ರಾಪುರ ಮಠದ ಶಾಖಾಮಠವಾದ ಗಿರಿನಗರದ ಶ್ರೀರಾಮಾಶ್ರಮದಲ್ಲಿ, ಸೋಮವಾರ, ಮಾರ್ಚ್ 7 ರಂದು ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.More »

ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನದಿಂದ ಹಾಡಾಯಿತು ಹಕ್ಕಿ ಕವನ ಸಂಕಲನ ಬಿಡುಗಡೆ

ಹಾಡಾಯಿತು ಹಕ್ಕಿ ಕವನ ಸಂಕಲನ ಬಿಡುಗಡೆ

ಕನ್ನಡ ಸಾಹಿತ್ಯ ಲೋಕದಲ್ಲಿ ಭಾವಗೀತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.More »

ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ-ನಮ್ಮ ಭಾರತವನ್ನು ಕಾಣಬೇಕುಃ ರಾಘವೇಶ್ವರ ಶ್ರೀ

ಕಾರ್ಯಕ್ರಮದ ಉದ್ಘಾಟನೆ

ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ-ನಮ್ಮ ಭಾರತವನ್ನು ಕಾಣಬೇಕು. ಎಲ್ಲಿಯವರೆಗೆ ನಮ್ಮ ನೆಲ ಹಾಗೂ ನಮ್ಮ ನೆಲೆಯನ್ನು ಮರೆಯೋದಿಲ್ವೋ ಅಲ್ಲಿಯವರೆಗೆ ಒಳಿತು ನಮ್ಮನ್ನು ಬಿಟ್ಟು ಹೋಗಲ್ಲ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರು ಹೇಳಿದರು.More »

ಹೊಸಬೆಳಕು ಯೋಜನೆಯಡಿಯಲ್ಲಿ ಎಲ್ ಇ ಡಿ ಬಲ್ಬ್ ಪಡೆಯಲು ಬೆಸ್ಕಾಂ ಅಥವಾ ಬೆಂಗಳೂರು ಒನ್ ಗೆ ಭೇಟಿ ನೀಡಿ

ಎಲ್ ಇ ಡಿ ಬಲ್ಬ್ ದೊರೆಯುವ ಕೆಲವು  ಬೆಸ್ಕಾಂ ಮತ್ತು ಬೆಂಗಳೂರು ಒನ್ ನ ಪಟ್ಟಿ

ಹೊಸಬೆಳಕು ಎಂಬ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರ ಉದ್ದೇಶಿಸಿರುವ ಎಲ್ ಇ ಡಿ ಬಲ್ಬ್ ವಿತರಣಾ ಕಾರ್ಯ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ.
More »

ಗೋಪಾಲನ್ ಮಾಲ್‍ನಲ್ಲಿ ಅಗ್ನಿ ಅವಘಡ

ರಾಜರಾಜೇಶ್ವರಿ ನಗರದಲ್ಲಿರುವ ಗೋಪಾಲನ್ ಮಾಲ್‍ನಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.More »

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಶನಿವಾರ ವರ್ಣಮೈತ್ರಿ ಕಲಾ ಉತ್ಸವ

ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ ಶನಿವಾರ, ಜ. 30 ರಂದು 'ವರ್ಣಮೈತ್ರಿ ಕಲಾ ಉತ್ಸವ' ಸಂಪನ್ನವಾಗಲಿದೆ.More »

ಬೆಂಗಳೂರು ನಗರದೊಳಗಡೆ ಬಸ್‌ಗಳ ಪ್ರವೇಶ ನಿಷೇಧ

ರಾಜ್ಯ ಸರ್ಕಾರ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಹಿನ್ನೆಲೆಯಲ್ಲಿ ಖಾಸಗಿ ಬಸ್, ಕೆಎಸ್​ಆರ್​ಟಿಸಿ ಹಾಗೂ ಹೊರ ರಾಜ್ಯದ ಎಲ್ಲಾ ಬಸ್ ಗಳಿಗೆ ಬೆಂಗಳೂರು ನಗರ ಪ್ರವೇಶವನ್ನು ನಿರ್ಬಂಧಿಸಿದೆ.More »

ಪ್ರೆಸ್ ಕ್ಲಬ್ ಆವರಣದಲ್ಲಿದ್ದ ಶ್ರೀಗಂಧದ ಮರ ಕಳವು

ಪ್ರೆಸ್ ಕ್ಲಬ್ ಆವರಣದಲ್ಲಿದ್ದ ಶ್ರೀಗಂಧದ ಮರ ಕಳವು

ಬೆಂಗಳೂರು ನಗರದ ಪ್ರೆಸ್ ಕ್ಲಬ್ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ರಾತ್ರೋ ರಾತ್ರಿ ಹೊತ್ತೊಯ್ಯಲಾಗಿದೆ.More »

ಅಲ್‌ ಖೈದಾ ನಂಟು; ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ

ಅಲ್‌ ಖೈದಾ ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.More »

ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ

ಬೆಂಗಳೂರು ನಗರದ ನಾಗರಿಕರು ಇನ್ನು ಮುಂದೆ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಸ್ಕರಣೆಯಾಗುವ (ಹಸಿ) ತ್ಯಾಜ್ಯ ಮತ್ತು ಸಂಸ್ಕರಣೆಯಾಗದ (ಒಣ) ತ್ಯಾಜ್ಯವಾಗಿ ವಿಂಗಡಣೆ ಮಾಡಬೇಕುMore »

ಬಿಜೆಪಿ ಶಾಸಕ ಆರ್‌ ಜಗದೀಶ್‌ ನಿಧನ

ಬಿಜೆಪಿ ಶಾಸಕರಾದ ಆರ್‌ ಜಗದೀಶ್‌ ಅವರು ಹೃದಯಾಘಾತದಿಂದ ಸೋಮವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.More »

ಬಿಎಂಟಿಸಿ ಬಸ್ ಹಾಗೂ ಬೈಕ್ ಡಿಕ್ಕಿ, ಓರ್ವ ಯುವಕನ ಸಾವು

ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೋರ್ವ
ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ
ಸಾರಾಯಿಪಾಳ್ಯದಲ್ಲಿ ನಡೆದಿದೆ.More »

ಭೂಗತ ಪಾತಕಿ ಛೋಟಾ ಶಕೀಲ್ ಸಹಚರನ ಬಂಧನ

ಭೂಗತ ಪಾತಕಿ ಛೋಟಾ ಶಕೀಲ್  ಸಹಚರನ ಬಂಧನ

ಬೆಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಕುಖ್ಯಾತ ಭೂಗತ ಪಾತಕಿ ಛೋಟಾ ಶಕೀಲ್‌ ಸಹಚರನೊಬ್ಬನನ್ನು ಬಂಧಿಸಿದ್ದಾರೆ.More »

ಮೆಟ್ರೋ ರೀಚ್‌-2 ಗೆ ಚಾಲನೆ

ನಮ್ಮ ಮೆಟ್ರೋಗೆ ಚಾಲನೆ ನೀಡಿದ ನಂತರ ಮೆಟ್ರೋದಲ್ಲಿ ಸಂಚರಿಸಿದ ಮುಖ್ಯಮಂತ್ರಿ ಮತ್ತು ವೆಂಕಯ್ಯ ನಾಯ್ಡು

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ರೀಚ್ 2 ನಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.More »

ಸೋಮವಾರ ಮೆಟ್ರೋ ರೀಚ್‌-2 ಉದ್ಘಾಟನೆ

ನಮ್ಮ ಮೆಟ್ರೋ ( ಸಾಂದರ್ಭಿಕ ಚಿತ್ರ )

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ರೀಚ್‌-2ರಲ್ಲಿ ನಮ್ಮ ಮೆಟ್ರೋ ಸಂಚಾರ ಸೋಮವಾರ ಸಂಜೆ ಆರಂಭವಾಗಲಿದೆ.More »

ಭಾನುವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಪೀಣ್ಯ 220/ 66/ 11 ಕಿ.ವ್ಯಾ. ಸಾಮರ್ಥ್ಯದ ಎಸ್‌ಆರ್‌ಎಸ್‌ ಪೀಣ್ಯ ರಿಸೀವಿಂಗ್‌ ಸ್ಟೇಷನ್‌ನಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅ. 11, ಭಾನುವಾರದಂದು ಬೆಂಗಳೂರು ಉತ್ತರ ಭಾಗದ ನೂರಾರು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.More »

ಬಿಬಿಎಂಪಿಯಲ್ಲಿ ವಿತರಣೆಯಾಗದ ಚುನಾವಣಾ ಗುರುತಿನ ಚೀಟಿ, ಅಧಿಕಾರಿಗಳಿಗೆ ಮೇಯರ್ ಮಂಜುನಾಥ ರೆಡ್ಡಿ ಎಚ್ಚರಿಕೆ

ಮೇಯರ್ ಮಂಜುನಾಥ ರೆಡ್ಡಿ ಮಂಗಳವಾರ ಬಿಬಿಎಂಪಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ನೂರಾರು ಚುನಾವಣಾ ಗುರುತಿನ ಚೀಟಿ ವಿತರಣೆಯಾಗದೆ ಬಿಬಿಎಂಪಿ ಕಚೇರಿಯಲ್ಲಿ ಬಿದ್ದಿರುವುದನ್ನು ಗಮನಿಸಿದರು.More »

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೊಸ ಟಿಕೇಟ್ ನೀಡುವ ವ್ಯವಸ್ಥೆ

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಈಗ ಡಿಜಿಟಲ್ ಸರದಿಗೆ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.More »

ಬೆಂಗಳೂರಿನಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲಃ ಬೆಸ್ಕಾಂ

ಬುಧವಾರದಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡದಿರಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿರ್ಧರಿಸಿದೆ.More »

ಬಿಬಿಎಂಪಿ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಮೈತ್ರಿಕೂಟದ ತೆಕ್ಕೆಗೆ

ಬಿಬಿಎಂಪಿ ಮೇಯರ್  - ಉಪಮೇಯರ್ ಚುನಾವಣೆ

ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ ಎನ್ ಮಂಜುನಾಥ ರೆಡ್ಡಿ ಬಹುಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.More »

ಬಿಬಿಎಂಪಿ ಚುನಾವಣೆಃ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ವೇದಿಕೆ ಸಜ್ಜು

ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಚುನಾವಣಾ ತಯಾರಿ

ಬಹಳ ನಿರೀಕ್ಷೆ ಉಟ್ಟಿಸಿರುವ ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಚುನಾವಣೆ ಶುಕ್ರವಾರ ನಡೆಯಲಿದೆ.More »

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಯಾವುದೇ ಷರತ್ತು ವಿಧಿಸಿಲ್ಲಃ ದೇವೇಗೌಡ

ದೇವೇಗೌಡರೊಂದಿಗೆ ಚರ್ಚಿಸಲು ದೇವೇಗೌಡರ ನಿವಾಸಕ್ಕೆ ಆಗಮಿಸಿದ ಡಾ. ಜಿ ಪರಮೇಶ್ವರ್

ಬಿಬಿಎಂಪಿ ಅಧಿಕಾರದ ಚುಕ್ಕಾಣಿಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಮಾತುಕತೆ ಬುಧವಾರ ಬಿರುಸುಗೊಂಡಿದ್ದು, ಈ ಸಂಬಂಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.More »

ಬೆಂಗಳೂರಿನಲ್ಲಿ ದಿನಕ್ಕೆ 2 ಗಂಟೆ ಲೋಡ್‌ ಶೆಡ್ಡಿಂಗ್‌ !

ರಾಜ್ಯಾದ್ಯಂತ ಈ ವರ್ಷ ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತವಾಗಿರುವುದರಿಂದ ಬೆಂಗಳೂರು ಸೇರಿದಂತೆ ಲೋಡ್‌ ಶೆಡ್ಡಿಂಗ್‌ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.More »

ಬಿಬಿಎಂಪಿ ಚುನಾವಣೆಃ ಮತ್ತೆ ಅರಳಿದ ಕಮಲ, 'ಕೈ' ಸುಟ್ಟುಕೊಂಡ ಕಾಂಗ್ರೆಸ್

ಬಿಜೆಪಿ ಕಚೇರಿಯಲ್ಲಿ ಗೆಲುವಿನ ಸಂಭ್ರಮಾಚರಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅತಿ ದೊಡ್ದ ಪಕ್ಷವಾಗಿ ಹೊರಹೊಮ್ಮಿದೆ.More »

ಬಿಬಿಎಂಪಿ ಚುನಾವಣೆ: ಕಾಂಗ್ರೆಸ್ ಗೆ ಮುಖಭಂಗ, ಬಿಜೆಪಿ ಗೆಲುವಿನತ್ತ

ತೀವ್ರ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರಳ ಬಹುಮತದತ್ತ ಸಾಗುತ್ತಿದೆ.More »

ಬಿಬಿಎಂಪಿ ಚುನಾವಣೆ ಮತ ಎಣಿಕೆಃ ಬಿಜೆಪಿ ಮುನ್ನಡೆ

ಶನಿವಾರ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 197 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ಆರಂಭಗೊಂಡಿದೆ.More »

ಬಿಬಿಎಂಪಿ ಚುನಾವಣೆ ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಮಂಗಳವಾರ ಆ. ೨೫ ರಂದು, ಮತ ಎಣಿಕೆ ದಿನ ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿದ್ದಾರೆ.More »

ಬಿಬಿಎಂಪಿ ಚುನಾವಣೆ: ಮತದಾನಕ್ಕೆ ನೀರಸ ಪ್ರತಿಕ್ರಿಯೆ

ಮತದಾನ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಕುಟುಂಬ

ಬೃಹತ್ ಮಹಾನಗರ ಪಾಲಿಕೆ ಚುನಾವಣೆಯ ಮತದಾನ 5 ಗಂಟೆಗೆ ಮುಕ್ತಾಯಗೊಂಡಿದ್ದು, ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.More »

ಬಿಬಿಎಂಪಿ ಚುನಾವಣೆ ಮತದಾನ ಆರಂಭ

ಬಿಬಿಎಂಪಿ ಚುನಾವಣೆ ಮತದಾನ ಆರಂಭ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮತದಾನ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ.More »

ಬಿಬಿಎಂಪಿ ಚುನಾವಣೆಗೆ ಸಿದ್ಧತೆ

ಬಿಬಿಎಂಪಿ ಚುನಾವಣಾ ತಯಾರಿ

ಬಿಬಿಎಂಪಿ ಚುನಾವಣಾ ಮಹಾಸಮರಕ್ಕೆ ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಸರ್ವ ಸನ್ನದ್ಧವಾಗಿದೆ.More »

ನಿಮ್ಹಾನ್ಸ್​ ನಲ್ಲಿ ಗುಂಡಿನ ದಾಳಿ ನಡೆಸಿದ ಮಾನಸಿಕ ಅಸ್ವಸ್ಥ ಖೈದಿ ಸಾವು

ಕಾರ್ಯಾಚರಣೆಯಲ್ಲಿ ತೊಡಗಿರುವ ಕಮಾಂಡೋಗಳು

ಭಾನುವಾರ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯ ರೈಫಲ್ ಕಸಿದುಕೊಂಡು ಮನಬಂದಂತೆ ಗುಂಡಿನ ದಾಳಿ ನಡೆಸಿದ ವಿಚಾರಣಾಧೀನ ಕೈದಿ ರೌಡಿಶೀಟರ್ ವಿಶ್ವ ಮೃತಪಟ್ಟಿದ್ದಾನೆ.More »

ಬೆಂಗಳೂರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮನ : ಎರಡು ದಿನ ನಿಷೇಧಾಜ್ಞೆ

 ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಫೈಲ್ ಚಿತ್ರ)

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ 2 ದಿನಗಳ ಬೆಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ವಿಧಿಸಿ ನಗರ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.More »

ಸಂಚಾರ ನಿಯಮ ಉಲ್ಲಂಘನೆಯ ಪ್ರಥಮ ಪ್ರಕರಣದಲ್ಲೇ ಡ್ರೈವಿಂಗ್‌ ಲೈಸನ್ಸ್‌ ಜಪ್ತಿ

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಸಂಚಾರ ನಿಯಮ ಉಲ್ಲಂಘನೆಯ ಪ್ರಥಮ ಪ್ರಕರಣದಲ್ಲೇ ಡ್ರೈವಿಂಗ್‌ ಲೈಸನ್ಸ್‌ ಜಪ್ತಿ ಮಾಡಲಾಗುತ್ತದೆ.More »

ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ವಿಧಾನಸಭೆ ಅಧಿವೇಶನ (ಫೈಲ್ ಚಿತ್ರ)

ಮಂಗಳವಾರ ಬಿಜೆಪಿ, ಜೆಡಿಎಸ್ ಸದಸ್ಯರ ವಿರೋಧದ ನಡುವೆಯೇ ಬಿಬಿಎಂಪಿ ವಿಧೇಯಕ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.More »

ಬಿಬಿಎಂಪಿ ಚುನಾವಣಾ ದಿನಾಂಕ ನಿಗದಿ : ಆಗಸ್ಟ್ 22 ಕ್ಕೆ ಚುನಾವಣೆ

ಬಿಬಿಎಂಪಿ (ಫೈಲ್ ಚಿತ್ರ)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಗಸ್ಟ್ 22ರಂದು ಚುನಾವಣೆ ನಡೆಸುವುದಾಗಿ ಗುರುವಾರ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಘೋಷಿಸಿದೆ.More »

ಐದು ಭಾಗಗಳಾಗಿ ಬಿಬಿಎಂಪಿ ವಿಭಜನೆಗೆ ಸಮಿತಿ ಶಿಫಾರಸು

BBMP Office

ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಕುರಿತು ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ ಎಸ್ ಪಾಟೀಲ್ ಸಮಿತಿ ಸೋಮವಾರ ಬಿಬಿಎಂಪಿಯನ್ನು ಐದು ಭಾಗಗಳಾಗಿ ವಿಭಜನೆ ಮಾಡಬೇಕೆಂಬ ಶಿಫಾರಸು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದೆ.More »

ಬೆಂಗಳೂರಿನಲ್ಲಿ 2 ಸಿಗ್ನಲ್‌ಫ್ರೀ ಕಾರಿಡಾರ್‌ಗೆ ಬಿಬಿಎಂಪಿ ಮತ್ತೆ ಚಾಲನೆ

ಸಾಂದರ್ಭಿಕ ಚಿತ್ರ

ಮೂರು ವರ್ಷಗಳ ಹಿಂದೆ ಘೋಷಣೆಯಾಗಿದ್ದ ಎರಡು ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಬಿಎಂಪಿ ಸಿದ್ಧತೆ ನಡೆಸಿದೆ.More »

ಬಿಬಿಎಂಪಿ ಚುನಾವಣೆ: ರಾಜ್ಯಕ್ಕೆ 8 ವಾರಗಳ ಗಡವು ನೀಡಿದ ಸುಪ್ರೀಂ

ಸುಪ್ರೀಂಕೋರ್ಟ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು 8 ವಾರಗಳ ಕಾಲ ಮುಂದೂಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.More »

ಬಿಬಿಎಂಪಿ ಚುನಾವಣೆ ಮುಂದೂಡಿಕೆ ಅರ್ಜಿ ವಿಚಾರಣೆ ಜುಲೈ 3ಕ್ಕೆ

ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕೆಂಬ ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ಜುಲೈ 3ಕ್ಕೆ ನಡೆಯಲಿದೆ.More »

ಬಿಬಿಎಂಪಿ ಚುನಾವಣೆ ತಡೆಗೆ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕೆಂದು ಶತಾಯ ಗತಾಯ ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಅಂತಿಮ ಹೋರಾಟದ ಭಾಗವಾಗಿ ಇದೀಗ ಸುಪ್ರೀಂಕೋರ್ಟ್‌ನ ಮೊರೆ ಹೋಗಿದೆ.More »

ಬಿಬಿಎಂಪಿ ಚುನಾವಣಾ ದಿನಾಂಕ ಪ್ರಕಟ : ಗುರುವಾರದಿಂದಲೇ ನೀತಿ ಸಂಹಿತೆ ಜಾರಿ

ಬಿಬಿಎಂಪಿ (ಫೈಲ್ ಚಿತ್ರ)

ಬಿಬಿಎಂಪಿ ಚುನಾವಣಾ ದಿನಾಂಕ ಘೊಷಣೆಯಾಗಿದ್ದು, ಜುಲೈ 28ರಂದು ಚುನಾವಣೆ ನಡೆಯಲಿದ್ದು ಗುರುವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.More »

ಗುರುವಾರ ಬಿಬಿಎಂಪಿ ಚುನಾವಣಾ ದಿನಾಂಕ ಪ್ರಕಟ

ಬಿಬಿಎಂಪಿ (ಫೈಲ್ ಚಿತ್ರ)

ಗುರುವಾರ 12 ಗಂಟೆಗೆ ನಡೆಯಲಿರುವ ರಾಜ್ಯ ಚುನಾವಣಾ ಆಯೋಗದ ಪತ್ರಿಕಾ ಗೋಷ್ಠಿಯಲ್ಲಿ ಬಿಬಿಎಂಪಿ ಚುನಾವಣಾ ದಿನಾಂಕ ಪ್ರಕಟವಾಗಲಿದೆ.More »

The Ultimate Job Portal
Netzume - Resume Website Gou Products

Other News

© bangalorewaves. All rights reserved. Developed And Managed by Rishi Systems P. Limited