ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳಲು ಅಮೆರಿಕ ಸಜ್ಜಾಗುತ್ತಿದೆ. ಅಮೆರಿಕದಲ್ಲಿನ ಎನ್.ಆರ್.ಐ ಗಳು ಸೆ.28ರಂದು ನ್ಯೂಯಾರ್ಕ್ ನಲ್ಲಿರುವ ಮ್ಯಾನ್ ಹಟನ್ ನಲ್ಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸ್ಟೇಡಿಯಂ ನಲ್ಲಿ ಪ್ರಧಾನಿ ಮೋದಿ ಭಾಷಣವನ್ನು ಆಯೋಜಿಸಿದ್ದಾರೆ.
20ಸಾವಿರ ಜನರು ಭಾಷಣಕ್ಕೆ ಸಾಕ್ಷಿಯಾಗಲಿದ್ದು, ಎಂ.ಎಸ್.ಜಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಿ ನಾಯಕ ಎಂಬ ಖ್ಯಾತಿಗೂ ಮೋದಿ ಪಾತ್ರರಾಗಲಿದ್ದಾರೆ.
ಅಮೆರಿಕದಲ್ಲಿ ಲಕ್ಷಾಂತರ ಎನ್.ಆರ್.ಐಗಳು ಪ್ರಧಾನಿ ಮೋದಿಯವ ಅಭಿಮಾನಿಗಳಿದ್ದಾರೆ. ಮೋದಿಯವರನ್ನು ಪ್ರತ್ಯಕ್ಷ ನೋಡುವುದಷ್ಟೇ ಅಲ್ಲ ಭಾಷಣ ಕೇಳಲು ಕಾತರರಾಗಿರುವುದರಿಂದ ಈ ಭಾಷಣ ಆಯೋಜಿಸಲಾಗಿದೆ.
ಪ್ರಧಾನಿ ಮೋದಿ ಕಾರ್ಯಕ್ರಮ ಆಯೋಜನೆಗಾಗಿಯೇ ಇಂಡೀಯನ್ ಅಮೆರಿಕನ್ ಕಮ್ಯೂನಿಟಿ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮೋದಿ ಭಾಷಣವನ್ನು ಅಮೆರಿಕ, ಭಾರತ ಸೇರಿ ವಿಶ್ವದ ಹಲವೆಡೆ 3ಡಿ ಮೂಲಕ ನೇರ ಪ್ರಸಾರದ ಜವಾಬ್ದಾರಿಯನ್ನು ಸೆಟಲೈಟ್ ವಾಹಿನಿಯೊಂದಕ್ಕೆ ನೀಡಲಾಗಿದೆ.