ನವದೆಹಲಿ : ಕಾರು ಕಂಪನಿಗಳ ದಿಗ್ಗಜ ಕೊರಿಯಾ ಮೂಲದ ಹ್ಯುಂಡೈ ಕಂಪನಿಯ ತನ್ನ ಪ್ರಸಿದ್ಧ ಕಾರುಗಳಲ್ಲಿ ಒಂದಾದ ಸ್ಯಾಂಟ್ರೊ ಕಾರಿನ ಉತ್ಪಾದನೆಯನ್ನು ಶೀಘ್ರವೇ ಸ್ಥಗಿತಗೊಳಿಸಲಿದೆ.
ಕಂಪನಿಯ ಅತಿ ಹೆಚ್ಚು ಯಶಸ್ವಿ ಕಾರು ಎನಿಸಿದ್ದ ಸ್ಯಾಂಟ್ರೋ ನವೆಂಬರ್ ತಿಂಗಳ ಕೊನೆಯಲ್ಲಿ ತೆರೆ ಮರೆಗೆ ಸರಿಯಲಿರುವುದು ಖಚಿತವಾಗಿದೆ. ಆದರೆ ಉತ್ಪಾದನೆಯನ್ನು ಮಾತ್ರ ನಿಲ್ಲಿಸಲಿರುವ ಕಂಪನಿ ಸ್ಯಾಂಟ್ರೋ ಕಾರುಗಳ ಬಿಡಿಭಾಗಗಳ ಸೇವೆಯನ್ನು ಮುಂದುವರೆಸಲಿದೆ.
ನೂತನವಾಗಿ ಮಾರುಕಟ್ಟೆಗೆ ಬಂದಿರುವ ಹ್ಯೂಂಡೈನ ಐ10 ಹಾಗೂ ಇಯೋನ್ ಕಾರುಗಳ ಬಗ್ಗೆ ಹೆಚ್ಚು ಗಮನ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
1998ರಲ್ಲಿ ಬಿಡುಗಡೆಯಾದ ಹ್ಯೂಂಡೈ ಸ್ಯಾಂಟ್ರೋ ಕಾರು ಭಾರತೀಯರ ನೆಚ್ಚಿನ ಸನ್ಶೈನ್ ಕಾರ್ ಎಂಬ ಬಿರುದು ಪಡೆದು ದಶಕಗಳ ಕಾಲ ಮಿಂಚಿತ್ತು. ಪ್ರಾರಂಭದಲ್ಲಿ ಈ ಕಾರಿಗೆ ಬಾಲಿವುಡ್ ನಟ ಶಾರುಖ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಜಾಗತಿಕ ಮಟ್ಟದಲ್ಲಿ ಒಟ್ಟು 18 ಲಕ್ಷ ಸ್ಯಾಂಟ್ರೋ ಕಾರುಗಳು ಮಾರಾಟಗೊಂಡಿದ್ದರೆ, ಭಾರತವೊಂದರಲ್ಲೇ ಈ ಕಾರು 13 ಲಕ್ಷ ಯುನಿಟ್ ಮಾರಾಟವಾಗಿತ್ತು.
ಹ್ಯೂಂಡೈ ನ ಸ್ಯಾಂಟ್ರೋ ಕಾರು ಉತ್ಪಾದನೆ ಸ್ಥಗಿತಗೊಂಡಂತೆಯೇ ಇತ್ತೀಚಿನ ದಿನಗಳಲ್ಲಿ ಷೆವರ್ಲೆ&id=16261'>ಷೆವರ್ಲೆ ಕಂಒಪನಿಯ ಸ್ಪಾರ್ಕ್, ಮಾರುತಿ ಕಂಪನಿಯ ಮಾರುತಿ 800, ಟೊಯೋಟಾ ಕಂಪನಿಯ ಕ್ವಾಲೀಸ್, ಬಜಾಜ್ ಸ್ಕೂಟರ್, ಹಿಂದೂಸ್ಥಾನ್ ಮೋಟಾರ್ಸ್ ನ ಸಾಂಪ್ರದಾಯಿಕ ಪ್ರತಿರೂಪದಂತಿದ್ದ ಅಂಬಾಸಿಡರ್ ಕಾರುಗಳ ಉತ್ಪಾದನೆಯೂ ಸ್ಥಗಿತಗೊಂಡಿವೆ.