ಮುಂಬೈ : 6 ತಿಂಗಳ ಹಿಂದಷ್ಟೇ ಪ್ರವಾಸದನೆಪದಲ್ಲಿ ಇರಾಕ್ ಮತ್ತು ಸಿರಿಯಾಗೆ ತೆರಳಿ ಅಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿ ಸಂಘಟನೆ ಸೇರಿ ತವರಿಗೆ ಮರಳಿರುವ ಮುಂಬೈನ ಕಲ್ಯಾಣ್ ಪ್ರದೇಶದ ಯುವಕ ಆರಿಫ್ ಮಜೀದ್ (22) ಪ್ಯಾಲೇಸ್ತಿನ್ ಯುವತಿಯನ್ನು ವಿವಾಹವಾಗಿದ್ದ ಎಂದು ವರದಿಯಾಗಿದೆ.
ಜುಲೈ ತಿಂಗಳಿನಲ್ಲಿ ಪ್ಯಾಲೇಸ್ತಿನ್ ಯುವತಿ ತಾಹಿರಾ ಎಂಬಾಕೆಯನ್ನು ವಿವಾಹವಾಗಿರುವುದು ಮಜೀದ್ನ ಫೇಸ್ಬುಕ್ನಲ್ಲಿ ಕಂಡುಬಂದಿದೆ.
ಈ ನಡುವೆ ಆರಿಫ್ ಮಜೀದ್ನನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ,ಆತನನ್ನು ಡಿ.8ರವರೆಗೂ ಎನ್ಐಎ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.
ಈ ವೇಳೆ ಎನ್ಐಎ ಐಸಿಸ್ಗೆ ಮಜೀದ್ ಸೇರ್ಪಡೆ ಹಾಗೂ ಅಲ್ಲಿ ಆತ ವಹಿಸಿದ್ದ ಪಾತ್ರ ಸೇರಿದಂತೆ ಇಡೀ ಸಂಚನ್ನು ಬಯಲಿಗೆಳೆಯುವ ಸಾಧ್ಯತೆಗಳಿವೆ.