ವಾಷಿಂಗ್ಟನ್ : ಟೈಮ್ ಮ್ಯಾಗಜಿನ್ನ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಹಿಂದಿಕ್ಕಿರುವ ಫರ್ಗ್ಯುಸನ್ ಪ್ರತಿಭಟನಾಕಾರರು ದಿಢೀರನೆ ಮೊದಲ ಸ್ಥಾನಕ್ಕೇರಿದ್ದಾರೆ. ನ.26ರವರೆಗೆ ಟೈಮ್ ಓದುಗರು ಮೋದಿ ಅವರತ್ತ ಹೆಚ್ಚಿನ ಆಸಕ್ತಿ ತೋರಿದರು. ಪರಿಣಾಮ ಮೋದಿ ಶೇ.11.1ರಷ್ಟು ಮತಗಳ ಮೂಲಕ ಮುಂಚೂಣಿಯಲ್ಲಿದ್ದರು. ಆದರೆ ಇತ್ತೀಚಿನ ವರದಿ ಪ್ರಕಾರ, ಫರ್ಗ್ಯುಸನ್ ಪ್ರತಿಭಟನಾಕಾರರು ಶೇ. 10.8ರಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದರೆ,
ಮೋದಿ ಶೇ.9.8 ಮತಗಳ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ನಂತರದ ಸ್ಥಾನಗಳಲ್ಲಿ ಹಾಂಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟಗಾರ ಜೊಷುವಾ ವೋಂಗ್, ಮಲಾಲಾ ಯೂಸಫ್ ಝಾಯ್, ರಷ್ಯಾ ಅಧ್ಯಕ್ಷ ಪುಟಿನ್ ಇದ್ದಾರೆ. ಡಿ.6ರಂದು ಈ ವಾರ್ಷಿಕ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಡಿ.8ರಂದು ವಿಜೇತನ ಹೆಸರನ್ನು ಘೋಷಿಸಲಾಗುತ್ತದೆ.