ಬೆಂಗಳೂರು : ರಾಜ್ಯ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್ ನ ಮಾಜಿ ಸಭಾಪತಿ, ಕಾಂಗ್ರೆಸ್ ನಾಯಕ ವಿ.ಆರ್ ಸುದರ್ಶನ್ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.
ಕೆ.ಪಿ.ಎಸ್.ಸಿ ಅಧ್ಯಕ್ಷರ ಹುದ್ದೆ ಕಳೆದ ಒಂದು ವರ್ಷದಿಂದ ಖಾಲಿ ಇತ್ತು. ಈ ಹುದ್ದೆಗೆ ಬಿಡಿಎ ಹಾಲಿ ಆಯುಕ್ತ ಶ್ಯಾಮ್ ಭಟ್, ಮುಖ್ಯಮಂತ್ರಿ ಕಚೇರಿ ಅಧಿಕಾರಿ ಕೆ.ಆರ್ ಶ್ರೀನಿವಾಸ್ ಅವರನ್ನು ನೇಮಿಸುವ ಸಾಧ್ಯತೆಗಳಿತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ಸಿಗರೇ ಆದ ವಿ.ಆರ್ ಸುದರ್ಶನ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಕೆ.ಪಿ.ಎಸ್.ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಅವರು 2013ರಲ್ಲಿ ನಿವೃತ್ತಿಯಾಗಿದ್ದರು. ಅವರ ನಿವೃತ್ತಿ ನಂತರ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಹಗರಣ ಬಯಲಿಗೆ ಬಂದಿತ್ತು. ಇದಾದ ಬಳಿಕ ಸರ್ಕಾರ ಕೆಪಿಎಸ್ಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ.