Untitled Document
Sign Up | Login    
Dynamic website and Portals
  
January 21, 2015

ಜಗತ್ತಿನ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಪೈಕಿ ಭಾರತಕ್ಕೆ 2ನೇ ಸ್ಥಾನ

ಡಾವೋಸ್ : ಜಗತ್ತಿನ ಎರಡನೇ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಸ್ವಿಸ್ ನ ಸಾರ್ವಜನಿಕ ಸಂಪರ್ಕಗಳ ಸಂಸ್ಥೆ ಎಡೆಲ್ಮ್ಯಾನ್ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ವಿವಿಧ ದೇಶಗಳ ವ್ಯಾಪಾರ, ಮಾಧ್ಯಮ ಮತ್ತು ಸರಕಾರೇತರ ಸಂಸ್ಥೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಇರುವ ವಿಶ್ವಾಸಾರ್ಹತೆ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತ ಜಗತ್ತಿನ ಅತಿ ವಿಶ್ವಾಸಾರ್ಹ ರಾಷ್ಟ್ರಗಳ ಪೈಕಿ 5ನೇ ಸ್ಥಾನ ಗಳಿಸಿತ್ತು. ಒಂದೇ ವರ್ಷದಲ್ಲಿ ಭಾರತ ಎರಡನೇ ಸ್ಥಾನಕ್ಕೇರಿರುವುದು ವಿಶೇಷವಾಗಿದೆ.

ಯು.ಎ.ಇ, ಭಾರತ, ಚೀನಾ ಹಾಗೂ ನೆದರ್ ಲ್ಯಾಂಡ್ ಸೇರಿದಂತೆ ಕೇವಲ 6 ರಾಷ್ಟ್ರಗಳು ಮಾತ್ರ ವಿಶ್ವಾಸಾರ್ಹ ರಾಷ್ಟ್ರಗಳೆಂಬ ಖ್ಯಾತಿ ಪಡೆದಿದ್ದರೆ. ಅವಿಶ್ವಾಸಾರ್ಹ ರಾಷ್ಟ್ರಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಜಪಾನ್, ರಷ್ಯಾ, ಹಾಂಕ್ ಕಾಂಗ್, ಸೌತ್ ಆಫ್ರೀಕಾ ಹಾಗೂ ಇಟಾಲಿ ಈ ಸಾಲಿನಲ್ಲಿ ಸ್ಥಾನ ಪಡೆದಿವೆ. ಟ್ರಸ್ಟ್ ಸೂಚ್ಯಂಕದ ಪ್ರಕಾರ 8 "ತಟಸ್ಥ" ರಾಷ್ಟ್ರಗಳ ಪೈಕಿ ಬ್ರೆಜಿಲ್, ಮಲೇಷ್ಯಾ, ಫ್ರಾನ್ಸ್, ಅಮೆರಿಕ ಸ್ಥಾನ ಪಡೆದಿವೆ.

ಸಮೀಕ್ಷೆಯ ಪ್ರಥಮ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಪ್ರಕಟಿಸಲಾಗಿದೆ.

ಸಮೀಕ್ಷೆಗೊಳಪಟ್ಟಿರುವ ರಾಷ್ಟ್ರಗಳ ಪೈಕಿ ಅರ್ಧದಷ್ಟು ರಾಷ್ಟ್ರಗಳಲ್ಲಿ ಮಾಧ್ಯಮಗಳ ಬಗ್ಗೆ ವಿಶ್ವಾಸಾರ್ಹತೆ ಕಡಿಮೆಯಾಗಿದ್ದರೆ ಭಾರತದಲ್ಲಿ ಮಾತ್ರ ಹಿಂದಿನ ವರ್ಷಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited