Untitled Document
Sign Up | Login    
Dynamic website and Portals
  
March 26, 2015

ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್: ಭಾರತಕ್ಕೆ 329 ರನ್ ಗಳ ಟಾರ್ಗೆಟ್

ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್: ಭಾರತಕ್ಕೆ 329 ರನ್ ಗಳ ಟಾರ್ಗೆಟ್

ಸಿಡ್ನಿ : 'ವಿಶ್ವಕಪ್ ಕ್ರಿಕೆಟ್' ಟೂರ್ನಿಯ ಹೈ ವೋಲ್ಟೇಜ್ ಪಂದ್ಯವೆಂದೇ ಗುರುತಿಸಲಾಗಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತವನ್ನು ಪೇರಿಸಿದೆ. ಭಾರತಕ್ಕೆ 329 ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 328ರನ್‌ ಗಳಿಸಿದೆ. ಆರಂಭದಲ್ಲೇ ಆಘಾತ ಎದುರಾದರೂ ಆಸ್ಟ್ರೇಲಿಯಾ ದೃಢ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿತ್ತು. ಸ್ಮಿತ್ ಹಾಗೂ ಫಿಂಚ್ ಅವರ ಜೊತೆಯಾಟ ಆಸ್ಟ್ರೇಲಿಯಾ ತಂಡ 328 ರನ್ ಗಳಿಸಲು ನೆರವಾಯಿತು.

ಆರಂಭಿಕ ಆಟಗಾರ ಫಿಂಚ್‌ ಮತ್ತು ಒನ್‌ ಡೌನ್‌ ಆಟಗಾರ ಸ್ಮಿತ್‌ ಆಕರ್ಷಕ ಶತಕ ಸಿಡಿಸಿ ಆಸ್ಟ್ರೇಕಲಿಯಾ ಉತ್ತಮ ಮೊತ್ತ ಗಳಿಸಲು ನೆರವಾದರು. ಭಾರತದ ಪರ ಉಮೇಶ್ ಯಾದವ್ ಉತ್ತಮ ಬೌಲಿಂಗ್ ನ ಪ್ರದರ್ಶನ ನೀಡಿದ್ದಾರೆ. ಸ್ಮಿತ್ ಹಾಗೂ ಫಿಂಚ್ ಅವರ ಜೊತೆಯಾಟವನ್ನು ಮುರಿಯುವ ಮೂಲಕ ಆಸ್ಟ್ರೇಲಿಯಾ ತಂಡವನ್ನು 328ಗಳಿಗೆ ಕಟ್ಟಿಹಾಕುವಲ್ಲಿ ಉಮೇಶ್ ಯಾದವ್ ಮಹತ್ವದ ಪಾತ್ರ ವಹಿಸಿದ್ದಾರೆ.

ಪ್ರಾರಂಭದಲ್ಲಿ ಆಸ್ಟ್ರೇಲಿಯಾ ತಂಡದ ವಿಕೆಟ್ ತೆಗೆಯಲು ಭಾರತೀಯ ಬೌಲರ್ ಗಳು ಹೆಣಗಿದರಾದರೂ, ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಸ್ಮಿತ್ ಹಾಗೂ ಫಿಂಚ್ ಜೊತೆಯಾಟ ಮುರಿದ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರರು ತರಗೆಲೆಗಳಂತೆ ಉದುರಿ ಪೆವಿಲಿಯನ್ ಪರೇಡ್ ನಡೆಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited