ನವದೆಹಲಿ : ಸಾರ್ವಜನಿಕ ವಲಯದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿವೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ಪ್ರತಿ ಲೀಟರ್ ಪೆಟ್ರೋಲ್ 80 ಪೈಸೆ ಹಾಗೂ ಡೀಸೆಲ್ ದರ 1.30ರೂಪಾಯಿ ಅಗ್ಗವಾಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್ ದರ 60ರೂಗಳಿದ್ದು, ಮಧ್ಯರಾತ್ರಿಯಿಂದ ಪೆಟ್ರೋಲ್ ದರ 59.20ರೂಪಾಯಿಗಲಿದೆ.
ಏ.1ರಂದು ಪೆಟ್ರೋಲ್,ಡೀಸೆಲ್ ದರ ಪರಿಷ್ಕರಣೆ ಮಾಡಲಾಗಿತ್ತು. ಪೆಟ್ರೋಲ್ 49ಪೈಸೆ ಹಾಗೂ ಡೀಸೆಲ್ 1.21ರೂಪಾಯಿಗಳಷ್ಟು ಅಗ್ಗವಾಗಿತ್ತು. 15 ದಿನಗಳ ಅಂತರದಲ್ಲೇ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಿರುವುದು ವಾಹನ ಸವಾರರಲ್ಲಿ ಸಂತಸ ಉಂಟುಮಾಡಿದೆ.
ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತ ಸತತವಾಗಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಲಿದೆ. ಪ್ರತಿ ತಿಂಗಳೂ ದರ ಇಳಿಕೆಯಾಗುತ್ತಿರುವುದರಿಂದ ವಾಹನ ಸವಾರರ ಮೇಲಿದ್ದ ಹೊರೆ ಕಡಿಮೆಯಾಗುತ್ತಿದೆ.