Untitled Document
Sign Up | Login    
Dynamic website and Portals
  
April 26, 2015

ಬೆಂಗಳೂರು ಬಳಿ ಫಾರ್ಮುಲಾ ಒನ್‌ ರೇಸಿಂಗ್‌ ಟ್ರ್ಯಾಕ್ ನಿರ್ಮಾಣ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸಮೀಪ ಫಾರ್ಮುಲಾ ಒನ್‌ ರೇಸಿಂಗ್‌ ಟ್ರ್ಯಾಕ್‌ ಹಾಗೂ ಮೋಟರ್‌ ನ್ಪೋರ್ಟ್ಸ್ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಅಮೆರಿಕ ಮೂಲದ ಆ್ಯಕ್ಷನ್‌ ಮೋಟರ್‌ ನ್ಪೋರ್ಟ್ಸ್ ಇಂಟರ್‌ನ್ಯಾಷನಲ್‌ (ಎಎಂಐ) ಕಂಪನಿ ಮುಂದಾಗಿದೆ.

ಈ ಕುರಿತಂತೆ ಸುಮಾರು 250 ಮಿಲಿಯನ್‌ ಡಾಲರ್‌ (1500 ಕೋಟಿ ರೂ.) ವೆಚ್ಚದ ಯೋಜನಾ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಫಾರ್ಮುಲಾ ಒನ್‌ ರೇಸಿಂಗ್‌ ಟ್ರ್ಯಾಕ್‌, ಮೋಟರ್‌ ನ್ಪೋರ್ಟ್ಸ್ ಕಾರು ಉತ್ಪಾದನೆ ಮತ್ತು ದುರಸ್ತಿ ಘಟಕದ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್‌, ವಾಲಿಬಾಲ್‌ ಹಾಗೂ ಫ‌ುಟ್‌ಬಾಲ್‌ ಮೈದಾನ ನಿರ್ಮಿಸುವ ಅಂಶವೂ ಈ ಪ್ರಸ್ತಾವನೆಯಲ್ಲಿದೆ.

ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಈ ಎಲ್ಲಾ ಯೋಜನೆಗಳ ಜತೆಗೆ ಬೆಂಗಳೂರು ಎಎಂಐ ರೇಸಿಂಗ್‌ ಕಾರು ಉತ್ಪಾದನೆ ಮತ್ತು ದುರಸ್ತಿ ಘಟಕವನ್ನು ಏಷ್ಯಾದ ಕೇಂದ್ರವಾಗಿ ರೂಪಿಸುವುದಾಗಿ ಕಂಪನಿ ಹೇಳಿದೆ.

ಈ ಕುರಿತಂತೆ ಕಂಪನಿ ಅಧಿಕಾರಿಗಳು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಬೆಂಗಳೂರು ಬಳಿ ಘಟಕ ಸ್ಥಾಪಿಸುವ ಕುರಿತು ತಾನು ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಕಂಪನಿ ಅಧಿಕಾರಿಗಳ ಜತೆಗಿನ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್‌, ಕಂಪನಿ ಸಲ್ಲಿಸಿರುವ ಪ್ರಸ್ತಾವನೆ ಕುರಿತು ಸೋಮವಾರ ಪ್ರವಾಸೋದ್ಯಮ ಮತ್ತು ಮೂಲ ಸೌಕರ್ಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚಿಸಿ ಬಳಿಕ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಕುರಿತು ಸರ್ಕಾರದ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಅಲ್ಲದೆ, ಎಎಂಐ ಜತೆಗಿನ ಮಾತುಕತೆ ಆರಂಭಿಕ ಹಂತದಲ್ಲಿದೆ. ಇದರಿಂದ ಜನರು ಮತ್ತು ಸರ್ಕಾರಕ್ಕೆ ಏನು ಅನುಕೂಲವಾಗುತ್ತದೆ ಎಂಬುದನ್ನು ಪರಿಶೀಲಿಸಿ ಅಗತ್ಯ ಇದೆ ಎಂದರೆ ಮಾತ್ರ ಸರ್ಕಾರ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಎಎಂಐ ಘಟಕ ಸ್ಥಾಪಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದ ದೇವನಹಳ್ಳಿ ಪಟ್ಟಣದ ಬಳಿ 300 ಎಕರೆ ಹಾಗೂ ರಾಮನಗರ ಜಿಲ್ಲೆಯಲ್ಲಿ ಕನಕಪುರ, ನೈಸ್‌ ಮತ್ತು ಮೈಸೂರು ರಸ್ತೆ ಮಧ್ಯೆ ಸುಮಾರು 300 ಎಕರೆ ಜಾಗವನ್ನು ಕಂಪನಿ ಅಧಿಕಾರಿಗಳು ನೋಡಿಕೊಂಡು ಬಂದಿದ್ದಾರೆ. ಯಾವುದಾದರೂ ಒಂದು ಪ್ರದೇಶದಲ್ಲಿ ಫಾರ್ಮುಲಾ ಒನ್‌ ರೇಸಿಂಗ್‌ ಟ್ರ್ಯಾಕ್‌ ಸೇರಿದಂತೆ ಇತರೆ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸುಮಾರು ಮೂರು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು. ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಕಂಪನಿ ಅಧಿಕಾರಿಗಳು ತಿಳಿಸಿರುವುದಾಗಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited