ನವದೆಹಲಿ : ಬಿ.ಎಸ್.ಎನ್.ಎಲ್ ಸಂಸ್ಥೆ ಘೋಷಿಸಿರುವ ರಾತ್ರಿಯಿಂದ ಬೆಳಿಗ್ಗೆ ವರೆಗೂ ಉಚಿತವಾಗಿ ಕರೆ ಮಾಡುವ ಸೌಲಭ್ಯ ಮೇ.
1(ಶುಕ್ರವಾರ) ರಾತ್ರಿಯಿಂದ ಜಾರಿಗೆ ಬರಲಿದೆ.
ಬಿ.ಎಸ್.ಎನ್.ಎಲ್ ಜಾರಿಗೆ ತಂದಿರುವ ನೂತನ ಸೇವೆಯಿಂದ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ವರೆಗೆ ಲ್ಯಾಂಡ್ ಲೈನ್ ನಿಂದ ಮಾಡುವ ಕರೆಗಳು ಸಂಪೂರ್ಣ ಉಚಿತವಾಗಿರಲಿದೆ. ಬಿ.ಎಸ್.ಎನ್.ಎಲ್ ನ ಹೊಸ ಯೋಜನೆ ಮಹತ್ವಾಕಾಂಕ್ಷಿಯಾಗಿದ್ದು, ಇದರಿಂದಾಗಿ ಸಂಸ್ಥೆಯ ಲ್ಯಾಂಡ್ ಲೈನ್ ಸಂಪರ್ಕಗಳು ಮತ್ತಷ್ಟು ಜನಪ್ರಿಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬಿ.ಎಸ್.ಎನ್.ಎಲ್ ಸಂಸ್ಥೆ ಲ್ಯಾಂಡ್ ಲೈನ್ ಸಂಪರ್ಕಗಳನ್ನು ಉತ್ತೇಜಿಸಲು ಜಾರಿಗೊಳಿಸಲಾಗಿರುವ ಈ ಸೇವೆಯಿಂದ, ಬೆಳಿಗ್ಗಿನವರೆಗೂ ಯಾವುದೇ ನೆಟ್ ವರ್ಕ್ ಗೆ ಉಚಿತವಾಗಿ ಕರೆ ಮಾಡಬಹುದಾಗಿದ್ದು ಈ ಸೌಲಭ್ಯ ಮೊಬೈಲ್ ನೆಟ್ ವರ್ಕ್ ಗಳಿಗೆ ಕರೆ ಮಾಡಿದರೂ ಅನ್ವಯಿಸಲಿದೆ.
ಇತ್ತೀಚಿನ ದಿನಗಳಲ್ಲಿ ಬಿ.ಎಸ್.ಎನ್.ಎಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಟ್ರಾಯ್ ಬಿಡುಗಡೆ ಮಾಡಿರುವ ವರದಿಯಲ್ಲಿ ಏರ್ ಟೆಲ್ ಸಂಸ್ಥೆಯ ಲ್ಯಾಡ್ ಲೈನ್ ಸಂಪರ್ಕಗಳನ್ನು ಜನರು ಹೆಚ್ಚು ಬಳಕೆ ಮಾಡುತ್ತಿರುವುದು ತಿಳಿದುಬಂದಿದೆ.