ಕಠ್ಮಂಡು : 'ನೇಪಾಳ'ದಲ್ಲಿ ಸಂಭವಿಸಿರುವ ಭೀಕರ ಭೂಕಂಪಕ್ಕೆ 6,300 ಜನರು ಸಾವನ್ನಪ್ಪುವುದರೊಂದಿಗೆ 2.5ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.
7.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿರುವ ಪರಿಣಾಮ, ನೇಪಾಳ ಕಳೆದ 8 ದಶಕಗಳಲ್ಲೆ ಕಂಡರಿಯದ ಪ್ರಕೃತಿ ವಿಕೋಪವನ್ನು ಎದುರಿಸಿತ್ತು. ಕಂಪನದ ತೀವ್ರತೆಗೆ 1,38,182 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದಾರೆ. 1,22,694 ಮನೆಗಳು ಭಾಗಶಃ ಹಾನಿಗೀಡಾಗಿವೆ
ಸರ್ಕಾರಿ ಅಧಿಕೃತ ಮಾಹಿತಿ ಪ್ರಕಾರ 10,394 ಕಚೇರಿಗಳು ನೆಲಸಮಗೊಂಡಿದ್ದರೆ 13,000 ಸರ್ಕಾರಿ ಕಟ್ಟಡಗಳ ಕೆಲ ಭಾಗಗಳಿಗೆ ಹಾನಿಯುಂಟಾಗಿದೆ. ನೇಪಾಳದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೆ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 1,00,000ರೂಪಾಯಿ, ಭೂಕಂಪದಲ್ಲಿ ಗಾಯಗೊಂಡವರಿಗೆ 25,000ರೂ, ಮನೆ ಕಳೆದುಕೊಂಡವರಿಗೆ 25,000 ರೂ ಪರಿಹಾರ ನೀಡಲು ನೇಪಾಳ ಸರ್ಕಾರ ನಿರ್ಧರಿಸಿದೆ.
ನೇಪಾಳದ ರಾಜಧಾನಿ ಕಠ್ಮಂಡು ಪದೇ ಪದೇ ಭೂಕಂಪ ಸಂಭವಿಸಿದ್ದರಿಂದ ಐತಿಹಾಸಿಕ ಕಟ್ಟಡಗಳು ಧರೆಗುರುಳಿದ್ದವು. ಈ ಅವಘಡದಲ್ಲಿ 6,300 ಜನರು ಸಾವನ್ನಪ್ಪಿದ್ದರೆ 14,000 ತೀವ್ರವಾಗಿ ಗಾಯಗೊಂಡಿದ್ದರು.