ಬೆಂಗಳೂರು : 'ಗ್ರಾಮ ಪಂಚಾಯ್ತಿ ಚುನಾವಣೆ'ಗೆ ದಿನಾಂಕ ನಿಗದಿಯಾಗಿದ್ದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮೇ.5ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ, ರಾಜ್ಯದ ಒಟ್ಟು 5844 ಗ್ರಾಮ ಪಂಚಾಯ್ತಿಗಳಿಗೆ ಮೇ 29 ಮತ್ತು ಜೂನ್ 2ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೂ.5ರಂದು ಮತಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ. ಇದೇ ಮೊದಲ ಬಾರಿಗೆ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಡ್ಡಾಯ ಮತದಾನ ಜಾರಿಯಾಗಿದೆ. ಅಲ್ಲದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 5 ವರ್ಷಕ್ಕೆ ನಿಗಧಿಯಾಗಿದೆ.
ರಾಜ್ಯದಲ್ಲಿ ಅವಧಿ ಮುಕ್ತಾಯಗೊಳಿಸದ 220 ಗ್ರಾಮಪಂಚಾಯ್ತಿಗಳಿದ್ದು, ಅವಧಿ ಮುಕ್ತಾಯಗೊಳ್ಳದ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಮೇ 10ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಮೊದಲನೇ ಹಂತದ ಚುನಾವಣೆಗೆ ಮೇ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಮೇ 19ರಂದು ನಾಮಪತ್ರಗಳ ಪರಿಶೀಲನೆ, 21 ನಾಮಪತ್ರ ಹಿಂಪಡೆಗೆ ಕೊನೆ ದಿನವಾಗಿದೆ. 2ನೇ ಹಂತ ಚುನಾವಣೆ ಮೇ 15ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ಮೇ 22 ನಾಮಪತ್ರ ಸಲ್ಲಿಕೆಗೆ ಕೊನೆ ದಿನದ 23ರಂದು ನಾಮಪತ್ರ ಪರಿಶೀಲನೆ 25ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.