ನವದೆಹಲಿ : ದೇಶದ ಜನತೆಗೆ ತಂತ್ರಜ್ನಾನ ದಿನದ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ, ಮೇ 11, 1998ರಂದು ನಡೆದ ಪೋಖ್ರಾನ್ ಪರಮಾಣು ಪರೀಕ್ಷೆ ಯಶಸ್ಸಿಗೆ ಅಂದಿನ ವಿಜ್ನಾನಿಗಳು ಮತ್ತು ರಾಜಕೀಯ ನಾಯಕರನ್ನು ಶ್ಲಾಘಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿರುವ ಮೋದಿ "1998 ರ ಈ ದಿನ ಪೋಖ್ರಾನ್ ಪರಮಾಣು ಪರೀಕ್ಷೆಯ ಯಶಸ್ಸಿಗೆ ನಮ್ಮ ವಿಜ್ಞಾನಿಗಳು ಮತ್ತು ರಾಜಕೀಯ ನಾಯಕತ್ವದ ಪರಿಶ್ರಮಕ್ಕೆ ನನ್ನ ಸಲಾಂ ಎಂದು ಹೇಳಿದ್ದಾರೆ.
ಭಾರತೀಯ ಇತಿಹಾಸದಲ್ಲಿ ಇದು ವಿಶೇಷ ದಿನ. 1998 ರ ಈ ದಿನದಂದು ಭಾರತ ರಾಜಸ್ಥಾನ ಪೋಖ್ರಾನ್ ನಲ್ಲಿ ಪರಮಾಣು ಪರೀಕ್ಷೆ ಮಾಡಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ಪರೀಕ್ಷೆಯ ಯಶಸ್ಸನ್ನು ಘೋಷಿಸಿದಾಗ ದೇಶ ಸಂಭ್ರಮಾಚರಣೆ ಮಾಡಿತ್ತು. ಮೇ 13 ರಂದು ಮತ್ತೆ ಪರೀಕ್ಷಿಸಿತು ಎಂದು ತಿಳಿಸಿದ್ದಾರೆ.
ನಮ್ಮ ವಿಜ್ಞಾನಿಗಳ ಅಭೂತಪೂರ್ವ ಕೆಲಸವೇ ಇದಕ್ಕೆ ಕಾರಣ. ಇದು ತಂತ್ರಜ್ಞಾನದ ಗೆಲುವು. ಅಟಲ್ ಅವರ ಸರ್ಕಾರ ಅದ್ಭುತ ಶೌರ್ಯವನ್ನು ಪ್ರದರ್ಶಿಸಿತ್ತು ಹಾಗೂ ಗಟ್ಟಿ ನಾಯಕತ್ವದ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿತ್ತು ಎಂದು ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.