ನವದೆಹಲಿ : ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೆ, ಫಾರ್ಮಾಸ್ಯುಟಿಕಲ್ ಸಂಸ್ಥೆಯೂ ಶಿಶು ಆಹಾರಗಳು ಮತ್ತು ಸಪ್ಲಿಮೆಂಟ್ ಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ.
ಮೆಡಿಕಲ್ ಸ್ಟೋರ್ ಗಳಲ್ಲಿ ಕೇವಲ ಔಷಧ, ಮಾತ್ರೆ, ಸಿರಪ್ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಶಿಶು ಆಹಾರಗಳು ಆರೋಗ್ಯಕ್ಕೆ ಉಪಯುಕ್ತ ಎಂಬ ಕಾರಣಕ್ಕೆ ಮೆಡಿಕಲ್ ಸ್ಟೋರ್ ಗಳಿಳಿಂದ ಜನರು ಖರೀದಿ ಮಾಡುತ್ತಾರೆ. ಮುಂದೊಮ್ಮೆ ಮ್ಯಾಗಿ ಎದುರಿಸಿದ ಸಮಸ್ಯೆ ಇವುಗಳಿಗೂ ಆಗಬಹುದು. ಆದ್ದರಿಂದ ಸೆರಿಲ್ಯಾಕ್, ನೆಸ್ಟಮ್, ಬೇಬಿ ಸೋಪ್, ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಪೌಡರ್, ತೈಲಗಳು ಇವುಗಳ ಮಾರಾಟವನ್ನೂ ನಿಷೇಧಿಸುವುದು ಸೂಕ್ತ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ಆತಂಕದ ಮಾತುಗಳನ್ನಾಡಿದ್ದಾರೆ.
ದೇಹದಾಢ್ರ್ಯಕ್ಕೆ ಬಳಸುವ ಪ್ರೋಟೀನ್ ಸಪ್ಲಿಮೆಂಟ್ ಗಳನ್ನೂ ಮಾರಾಟ ಮಾಡಕೂಡದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.