ನವದೆಹಲಿ : ಭಾರತ-ಪಾಕ್ ಸಂಬಂಧಗಳ ಸುಧಾರಣೆ ಬಗ್ಗೆ ಚರ್ಚಿಸಲು ಭಾರತ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ರಿಗೆ ಕರೆ ಮಾಡಿ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.
ಇದೇ ತಿಂಗಳಲ್ಲಿ ಆರಂಭಗೊಳ್ಳಲಿರುವ ಮುಸ್ಲಿಂರ ಪವಿತ್ರ ರಂಜಾನ್ ತಿಂಗಳಿಗೆ ಶುಭಾಶಯ ಕೋರಲು ಪಾಕ್ ಪ್ರಧಾನಿಗೆ ದೂರವಾಣಿ ಕರೆ ಮಾಡಿರುವ ಮೋದಿಯವರು ಪಾಕ್ ಬಂಧನದಲ್ಲಿರುವ ಭಾರತೀಯ ಮೀನುಗಾರರ ಬಿಡುಗಡೆ ಕುರಿತು ಹಾಗೂ ಇಂಡೋ-ಪಾಕ್ ಸಂಬಂಧ ಸುಧಾರಿಸುವ ಬಗ್ಗೆ ಚರ್ಚಿಸಿರುವುದಾಗಿ ತಿಳಿದು ಬಂದಿದೆ.
ಪಾಕ್ ಪ್ರಧಾನಿ ನವಾಜ್ ಶರೀಫ್ ರೊಂದಿಗೆ 5 ನಿಮಿಷ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ್ ಪ್ರಧಾನಿಯೊಂದಿಗೂ ಕರೆ ಮಾಡಿ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.