ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದೆಡೆ ದೇಶಾದ್ಯಂತ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಚೀನಾಗೆ ಗೋಮಾಂಸ ರಫ್ತು ಮಾಡಲು ಹರಸಾಹಸ ಪಡುತ್ತಿದೆ ಎನ್ನಲಾಗುತ್ತಿದೆ.
ಭಾರತದಿಂದ ರಫ್ತಾಗುವ ಗೊಮಾಂಸವನ್ನು ಸ್ವೀಕರಿಸಲು ಚೀನಾ ಮುಂದಾಗಿದೆ. ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದ ಎರಡು ವರ್ಷಗಳ ಬಳಿಕ ಅಂದರೆ ಕಳೆದ ತಿಂಗಳು ಚೀನಾವು ಗೋಮಾಂಸ ರಫ್ತು ಹಾದಿಯನ್ನು ಸುಗಮಗೊಳಿಸಿದೆ.
ದ್ವಿಪಕ್ಷೀಯ ಸಂಬಂಧದಲ್ಲಿದ್ದ ಅಸಮತೋಲನ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮುಂದಡಿಯಿಟ್ಟಿತ್ತು. ಅದರಂತೆ, ಗೋಮಾಂಸ, ದಾಳಿಂಬೆ, ಬಾಸುಮತಿಯೇರ ಅಕ್ಕಿ ಮತ್ತು ಓಕ್ರಾವನ್ನು ಭಾರತದಿಂದ ಖರೀದಿಸಲು ಚೀನಾ ನಿರ್ಧರಿಸಿದೆ.
ಮುಂದಿನ ತಿಂಗಳು ಚೀನಾದ ತಪಾಸಣಾ ತಂಡ ಭಾರತಕ್ಕೆ ಆಗಮಿಸಿ, ಇಲ್ಲಿನ ಮಾಂಸದ ಘಟಕಗಳನ್ನು ಪರಿಶೀಲಿಸಲಿದೆ. ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ಭಾರತದ ಮಾಂಸಕ್ಕೆ ನಿರ್ಬಂಧ ವಿಧಿಸಲಾಗಿತ್ತು.