ಗುವಹಟಿ : ಅಸ್ಸಾಂ ರಾಜಧಾನಿ ಗುವಾಹಟಿ ಸೇರಿದಂತೆ ವಿವಿಧ ಭಾಗಗಳಲ್ಲಿ ಬೆಳಿಗ್ಗೆ 5.6ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.
ಯಾವುದೇ ಜೀವಹಾನಿ ಅಥವಾ ಆಸ್ತಿ-ಪಾಸ್ತಿಗಳ ಬಗ್ಗೆ ಸದ್ಯ ವರದಿಯಾಗಿಲ್ಲ. ರಾಜ್ಯದ ಖೋಬ್ರಝಾರ್ ಜಿಲ್ಲೆಯಲ್ಲಿ 10ಕಿಮೀ ಆಳದಲ್ಲಿ, ಉತ್ತರಕ್ಕೆ 26.5 ಡಿಗ್ರಿ ಅಕ್ಷಾಂಶ ಹಾಗೂ ಪೂರ್ವಕ್ಕೆ 90.1 ಡಿಗ್ರಿ ರೇಖಾಂಶದಲ್ಲಿ ಭೂಕಂಪನದ ಕೇಂದ್ರಬಿಂದು ನೆಲೆಯಾಗಿತ್ತು ಎಂದು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ 6.40ರ ವೇಳೆಯಲ್ಲಿ ಸಂಭವಿಸಿದ ಭೂಕಂಪನದಿಂದ ಮನೆಗಳ ಕಿಟಕಿ, ಬಾಗಿಲುಗಳು ಅಲುಗಾಡಿದ್ದರಿಂದ ಜನತೆ ಭಯಭೀತರಾಗಿ ಮನೆಗಳಿಂದ ಹೊರಕ್ಕೆ ಓಡಿ ಬಂದರು. ಬೆಳಗಿನ ನಿದ್ದೆ ಮಂಪರಿನಲ್ಲಿದ್ದ ಜನ ಮಕ್ಕಳು-ಮರಿಗಳನ್ನು ಎತ್ತಿಕೊಂಡು ಬೀದಿಗೆ ಬಂದು ರಕ್ಷಣೆಗೆ ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಜಿಲ್ಲೆಯಾದ್ಯಂತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಭೂತಾನ್, ಬಾಂಗ್ಲಾದೇಶ, ನೇಪಾಳ ಹಾಗೂ ಈಶಾನ್ಯ ಭಾಗದ ಹಲವಡೆ ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.