ನವದೆಹಲಿ : ಆಮ್ ಆದ್ಮಿ ಸರ್ಕಾರ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ 526 ಕೋಟಿ ರೂಗಳನ್ನು ಜಾಹೀರಾತಿಗಾಗಿ ಮೀಸಲು ಇಡಲು ನಿರ್ಧರಿಸಿದೆ.
ಹಿಂದಿನ ವರ್ಷ ಸರ್ಕಾರ ಜಾಹೀರಾತಿಗೆ 24 ಕೋಟಿ ರೂ ವೆಚ್ಚ ಮಾಡಿತ್ತು. ಈ ವರ್ಷದ ಜಾಹೀರಾತಿಗೆ ಭಾರಿ ಮೊತ್ತದ 526 ಕೋಟಿಯೇಕೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.
`ಜೋಕಹಾ, ಸೋಕಿಯಾ' ಎಂಬ ಜಾಹೀರಾತಿನ ಸೂಚನಾ ಫಲಕದ ಅಡಿಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳ ಬಗ್ಗೆ ಕೇಜ್ರಿವಾಲ್ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ ಮತ್ತು ಟಿವಿ ಮತ್ತು ರೇಡಿಯೋಗಳಲ್ಲಿ 70 ಸೆಕೆಂಡ್ ಹೊಂದಿರುವ ಸ್ಲಾಟ್ ನ ಜಾಹೀರಾತು ಇದಾಗಿದೆ.