ಬೆಂಗಳೂರು : ಸಿಇಟಿ ಕೌನ್ಸೆಲಿಂಗ್ ನ ಎರಡನೇ ಸುತ್ತಿನ ವೃತ್ತಿಪರ ಕೋರ್ಸ್ಗಳ ಪ್ರವೇಶ ಜು.4 ರಂದು ಪ್ರಾರಂಭವಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ವೃತ್ತಿಪರ ಕೋರ್ಸ್ಗಳ ಪ್ರವೇಶದ ಮೊದಲ ಹಂತದ ಸೀಟು ಹಂಚಿಕೆ ಪೂರ್ಣಗೊಳಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜು.4 ರಿಂದ ಎರಡನೇ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲು ಸಜ್ಜಾಗಿದೆ. ಜು.4 ರ ಬೆಳಗ್ಗೆ 11 ರ ನಂತರ ಎರಡನೇ ಸುತ್ತಿನಲ್ಲಿ ಲಭ್ಯವಿರುವ `ಸೀಟ್ ಮ್ಯಾಟ್ರಿಕ್ಸ್'ನ್ನು ವೆಬ್ಸೈಟ್ http://kea.kar.nic.in/ ನಲ್ಲಿ ಪ್ರಕಟಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮಾಡಲು ಜುಲೈ 4 ಮಧ್ಯಾಹ್ನ 2 ರಿಂದ8 ರವರೆಗೆ ಅವಕಾಶ ಇರುತ್ತದೆ. ಜುಲೈ 10 ರ ಮಧ್ಯಾಹ್ನ 2 ಗಂಟೆಯ ನಂತರ ಸೀಟು ಹಂಚಿಕೆಯಾಗಲಿದೆ.
ಆಯ್ಕೆ ಮಾಡಿದ ವೃತ್ತಿಪರ ಸೀಟನ್ನು ಖಚಿತಪಡಿಸಿಕೊಂಡು ನಿಗದಿತ ಶುಲ್ಕ ಪಾವತಿಸಿ ಕಾಲೇಜುಗಳಲ್ಲಿ ದಾಖಲಾತಿಗೆ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಜುಲೈ 13 ರಿಂದ 15 ರ ವರೆಗೆ ಸಮಯವಿರುತ್ತದೆ.