ಮುಂಬೈ : ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದ್ದು, 3 ವಾರಗಳ ಗಡವು ನೀಡಿದೆ.
ಅಕ್ರಮ ಹಣ ಚಲಾವಣೆಯ ಸಂಬಂಧ ವಿಚಾರಣೆಗೆ ಹಾಜರಾಗಲು ಲಲಿತ್ ಮೋದಿ ಇನ್ನು 3 ವಾರಗಳಲ್ಲಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಯಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
2008 ರಲ್ಲಿ ವರ್ಲ್ಡ ಸ್ಪೋರ್ಟ್ಸ್ ಗ್ರೂಪ್ ಮತ್ತು ಮಲ್ಟಿ ಸ್ಕ್ರೀನ್ ಮೀಡಿಯಾ ನಡುವೆ ಟೆಲಿವಿಷನ್ ಹಕ್ಕು ಮಾರಾಟ ಮಾಡುವ ಸಂಬಂಧ 425 ಕೋಟಿ ರೂಪಾಯಿಯ ಒಪ್ಪಂದ ನಡೆದಿತ್ತು. ಈ ಒಪ್ಪಂದದಲ್ಲಿ ವರ್ಲ್ಡ ಸ್ಪೋರ್ಟ್ಸ್ ಗ್ರೂಪ್ ಅಕ್ರಮವಾಗಿ ಕೆಲವರಿಗೆ ಹಣ ನೀಡಿದೆ ಎಂದು ಬಿಸಿಸಿಐ ಆರೋಪ ಮಾಡಿ 2010 ರಲ್ಲಿ ದೂರು ದಾಖಲಿಸಿತ್ತು.