Untitled Document
Sign Up | Login    
Dynamic website and Portals
  
July 10, 2015

ಪ್ರತಿವರ್ಷ ಬ್ರಿಕ್ಸ್ ವಾಣಿಜ್ಯ ಮೇಳ ನಡೆಸಲು ಪ್ರಧಾನಿ ಮೋದಿ ಪ್ರಸ್ತಾಪ

'ಭವಿಷ್ಯಕ್ಕಾಗಿ 10 ಹೆಜ್ಜೆ', ಅಂಶಗಳನ್ನು ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ

 ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಶೃಂಗಸಭೆ

ಉಫಾ : ರಷ್ಯಾದ ಉಫಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ದೇಶಗಳ ಮಧ್ಯೆ ಪರಸ್ಪರ ಸಮನ್ವಯ ಮತ್ತು ಸಹಕಾರಕ್ಕಾಗಿ 10 ಅಂಶಗಳನ್ನು ಪ್ರಸ್ತಾಪಿಸಿದರು.

ಈ ಪ್ರಸ್ತಾವನೆಯನ್ನು ದಸ್ ಕದಮ್ - ಭವಿಷ್ಯಕ್ಕಾಗಿ 10 ಹೆಜ್ಜೆ ಎಂದು ಪ್ರಧಾನಿ ಮೋದಿ ಕರೆದಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು ಒಂದೇ ರೀತಿಯದ್ದಾಗಿದೆ, ಅದನ್ನು ಪರಸ್ಪರ ಸಹಾಕರ ಮತ್ತು ಬಾಂಧವ್ಯ ವೃದ್ದಿಯಿಂದ ಬಗೆಹರಿಸಲು ಸಾಧ್ಯವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಪ್ರಸ್ತಾಪನೆಯ ಪಟ್ಟಿಯ ಮೊದಲಲ್ಲಿರುವುದು ಬ್ರಿಕ್ಸ್ ದೇಶಗಳ ವ್ಯಾಪಾರ ಮೇಳ. ಮೊದಲ ವ್ಯಾಪಾರ ಮೇಳವನ್ನು ಆಯೋಜಿಸಲು ಭಾರತ ಬಯಸುತ್ತದೆ ಎಂದು ಪ್ರಧಾನಿ ಘೋಷಿಸಿದರು.

ಪ್ರಧಾನಿ ಮೋದಿಯ ಭವಿಷ್ಯಕ್ಕಾಗಿ 10 ಹೆಜ್ಜೆಯ ಅಂಶಗಳು ಈ ಕೆಳಗಿನಂತೆ ಇದೆ.

1. ಬ್ರಿಕ್ಸ್ ದೇಶಗಳ ವ್ಯಾಪಾರ ಮೇಳ
2. ಬ್ರಿಕ್ಸ್ ರೈಲ್ವೆ ಸಂಶೋಧನಾ ಮಂಡಳಿ
3. ಎಲ್ಲಾ ದೇಶಗಳ ಸರ್ವೋಚ್ಚ ಲೆಕ್ಕಪರಿಶೋಧನಾ ಸಂಸ್ಥೆಗಳ ನಡುವೆ ಸಹಕಾರ
4. ಬ್ರಿಕ್ಸ್ ಡಿಜಿಟಲ್ ತಂತ್ರಜ್ನಾನ ಬಳಕೆ
5. ಬ್ರಿಕ್ಸ್ ಕೃಷಿ ಸಂಶೋಧನಾ ಮಂಡಳಿ
6. ಬ್ರಿಕ್ಸ್ ರಾಜ್ಯ / ಸ್ಥಳೀಯ ಸರ್ಕಾರಗಳ ವೇದಿಕೆ
7. ನಗರೀಕರಣದಲ್ಲಿ ಎಲ್ಲಾ ದೇಶಗಳ ನಗರಗಳ ಪರಸ್ಪರ ಸಹಕಾರ
8. ಬ್ರಿಕ್ಸ್ ಕ್ರೀಡಾ ಕೌನ್ಸಿಲ್ ಮತ್ತು ವಾರ್ಷಿಕ ಬ್ರಿಕ್ಸ್ ಕ್ರೀಡಾಕೂಟ
9.ನ್ಯೂ ಡೆವೆಲಪ್‌ಮೆಂಟ್‌ ಬ್ಯಾಂಕ್‌ ಹಣದಲ್ಲಿ ನಿರ್ಮಿಸುವ ಪ್ರಥಮ ಯೋಜನೆಗೆ ಕೇವಲ ಸ್ವಚ್ಛ ಇಂಧನ ಬಳಕೆ
10.ಬ್ರಿಕ್ಸ್ ಚಲನಚಿತ್ರೋತ್ಸವ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited