ಜಮ್ಮು : ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು ಜಮ್ಮು-ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಭಾರೀ ಗುಂಡಿನ ದಾಳಿ ನಡೆಸಿದೆ.
ಘಟನೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, 4ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಭಾರತೀಯ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ.
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ದಾಳಿ ಗಡಿ ನಿಯಂತ್ರಣ ರೇಖೆ ನುಸುಳಿ ದಾಳಿ ನಡೆಸಿದ ಪಾಕಿಸ್ತಾನ, ಸತತ 2 ತಾಸು ಗುಂಡಿನ ದಾಳಿ ನಡೆಸಿತ್ತು. ಮತ್ತೆ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ.
ಪಾಕಿಸ್ತಾನಿ ಪಡೆಗಳು ಫಿರಂಗಿ, ಸ್ವಯಂಚಾಲಿತ ಶಸ್ತ್ರಾಸ್ತ್ರ, ರಾಕೆಟ್ ಉತ್ಕ್ಷೇಪಕ ಗ್ರೆನೇಡ್ ಮುಂದಾದವುಗಳನ್ನು ಉಪಯೋಗಿಸಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ ಎಂದು ವರದಿಯಾಗಿದೆ.