Untitled Document
Sign Up | Login    
Dynamic website and Portals
  
August 2, 2016

ಪಾಕ್ ಗೆ ನ್ಯೂಕ್ಲಿಯರ್ ರಿಯಾಕ್ಟರ್ ಮಾರಾಟ ಮಾಡಿದ ಚೀನಾ

ವಾಷಿಂಗ್ಟನ್ : ಪರಮಾಣು ಪೂರೈಕೆದಾರ ಸಮೂಹದ ನೀತಿ-ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಚೀನಾ ಪಾಕಿಸ್ಥಾನಕ್ಕೆ ಪರಮಾಣು ರಿಯಾಕ್ಟರ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಅಮೆರಿಕ ತಿಳಿಸಿದೆ.

ಇತ್ತೀಚಿಗಿನ ವರ್ಷಗಳಲ್ಲಿ ಚೀನಾ ಅಂತಾರಾಷ್ಟ್ರೀಯ ನೀತಿ-ನಿಯಮಗಳನ್ನು ಸ್ವಷ್ಟ ಉಲ್ಲಂಘನೆಮಾಡಿ ತನ್ನ ರಫ್ತು ನಿಯಂತ್ರಣಗಳನ್ನು ಗಮನಾರ್ಹವಾಗಿ ಬಲಪಡಿಸಿಕೊಂಡಿದೆ. ಎನ್‌ಎಸ್‌ಜಿ ನಿಯಮ ಉಲ್ಲಂಘಿಸಿ ಪಾಕ್ ಗೆ ಪರಮಾಣು ರಿಯಾಕ್ಟರ್‌ಗಳನ್ನು ಮಾರಾಟ ಮಾಡುವುದರ ಜತೆಗೆ ಗಂಭೀರ ಆತಂಕಗಳಿಗೆ ಕಾರಣವಾಗಿರುವ ಕೆಲವು ದೇಶಗಳಿಗೆ ಕ್ಷಿಪಣಿ ತಂತ್ರಜ್ಞಾನವನ್ನು ಕೂಡ ಅದು ಮಾರುತ್ತಿದೆ.

ಚೀನಾದ ಇಂತಹ ಚಟುವಟಿಕೆಗಳಿಂದಾಗಿ ಎನ್‌ಎಸ್‌ಜಿ ದೃಷ್ಟಿಯಲ್ಲಿ ಚೀನದ ಮಟ್ಟ ಕುಸಿಯುತ್ತಿದೆ ಎಂದು ವಾಷಿಂಗ್ಟನ್‌ನಲ್ಲಿನ ಶಸ್ತ್ರಾಸ್ತ್ರ ನಿಯಂತ್ರಣ ಸಂಘವು ತನ್ನ ಹೊಸ ವರದಿಯಲ್ಲಿ ಹೇಳಿದೆ.

ಅಣ್ವಸ್ತ್ರ ಪ್ರಸರಣ ತಡೆ ಮತ್ತು ನಿಶ್ಯಸ್ತ್ರೀಕರಣದ ವಿಚಾರದಲ್ಲಿಲ್ಲಿ ಬೀಜಿಂಗ್‌ನ ನಡವಳಿಕೆಯು ಗಂಭೀರವಾಗಿ ಪ್ರಶ್ನಾರ್ಹವಾಗಿದೆ. ಈ ನಿಟ್ಟಿನಲ್ಲಿ ವಾಷಿಂಗ್ಟನ್‌ ನ ಶಸ್ತ್ರಾಸ್ತ್ರ ನಿಯಂತ್ರಣ ಸಂಘ-ಎಸಿಎ-ಚೀನಾಕ್ಕೆ ಅತ್ಯಂತ ಕಳಪೆಯ ಎಫ್ ಗ್ರೇಡ್‌ ನೀಡಿರುವುದಾಗಿ ವರದಿ ತಿಳಿಸಿದೆ.

ಚೀನಾ ಪರಮಾಣು ಪೂರೈಕೆದಾರರ ಸಮೂಹದ ಓರ್ವ ಸದಸ್ಯ ರಾಷ್ಟ್ರವಾಗಿದ್ದು, ಇತ್ತೀಚೆಗೆ ಭಾರತ ಈ ಸಮೂಹದ ಹೊಸ ಸದಸ್ಯನಾಗುವುದಕ್ಕೆ ಚೀನಾ ಹಾಗೂ ಕೆಲದೇಶಗಳು ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದವು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited