ನವದೆಹಲಿ : ಕರಾಚಿ ಸಾಹಿತ್ಯೋತ್ಸವಕ್ಕೆ ಆಹ್ವಾನಿತರಾಗಿರುವ, ಇತ್ತೀಚಿಗೆ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ.
ಅನುಪಮ್ ಖೇರ್ ಅವರು ಫೆಬ್ರವರಿ 5ರಂದು ಕರಾಚಿ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಕರಾಚಿ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದ ಒಟ್ಟು 18 ಮಂದಿಯ ಪೈಕಿ 17 ಮಂದಿಗೆ ವೀಸಾ ನೀಡಲಾಗಿದೆ. ಆದರೆ ಖೇರ್ ಅವರೊಬ್ಬರಿಗೆ ಮಾತ್ರವೇ ವೀಸಾ ನಿರಾಕರಿಲಾಗಿದೆ.
ನನಗೆ ತುಂಬಾ ದುಃಖ ಮತ್ತು ನಿರಾಶೆಯಾಗಿದೆ. ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದ ಒಟ್ಟು 18 ಮಂದಿಯ ಪೈಕಿ 17 ಮಂದಿಗೆ ವೀಸಾ ನೀಡಲಾಗಿದ್ದು ನನಗೆ ಮಾತ್ರ ವೀಸಾ ನಿರಾಕರಿಸಲಾಗಿದೆ ಎಂದು ಖೇರ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಹೈ ಕಮಿಷನ್, ಅನುಪಮ್ ಖೇರ್ ಅವರು ವೀಸಾ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಹೇಳಿದೆ.