ಕಾಠ್ಮಂಡು : ನೇಪಾಳದ ಪರ್ವತ ಪ್ರದೇಶದಲ್ಲಿ 23 ಮಂದಿ ಪ್ರಯಾಣಿಕರಿದ್ದ ನಾಪತ್ತೆಯಾಗಿದ್ದ ಲಘು ವಿಮಾನದ ಅವಶೇಷ ಪತ್ತೆಯಾಗಿದ್ದು, ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ನೇಪಾಳದ ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಪೋಖ್ರಾ ವಿಮಾನ ನಿಲ್ದಾಣದಿಂದ ತಾರಾ ವಾಯುಸಂಸ್ಥೆಗೆ ಸೇರಿದ ಲಘು ವಿಮಾನ ಟೇಕ್ ಆಫ್ ಆದ 8 ನಿಮಿಷಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿರುವುದಾಗಿ ತಾರಾ ವಿಮಾನಯಾನ ಸಂಸ್ಥೆ ಮೂಲಗಳು ತಿಳಿಸಿತ್ತು.
ಪೋಖ್ರಾದಿಂದ ಜೋಮ್ ಸೋಮ್ ಗೆ ವಿಮಾನ ತೆರಳುತ್ತಿತ್ತು. ಆದರೆ ನೇಪಾಳದ ಪರ್ವತಶ್ರೇಣಿ ಪ್ರದೇಶದಲ್ಲಿ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿರುವುದಾಗಿ ತಾರಾ ಏರ್ ಸಂಸ್ಥೆಯ ವಕ್ತಾರ ಭಿಮ್ ರಾಜ್ ರಾಯ್ ಎಎಫ್ ಪಿಗೆ ತಿಳಿಸಿದ್ದರು. ರಕ್ಷಣೆಗಾಗಿ ಹೆಲಿಕಾಪ್ಟರ್ ಗಳನ್ನೂ ರವಾನಿಸಲಾಗಿತ್ತು.
ಇಬ್ಬರು ವಿದೇಶಿಯರು, ಇಬ್ಬರು ಪೈಲಟ್ ಹಾಗೂ 18 ಮಂದಿ ಪ್ರಯಾಣಿಕರು ಸೇರಿ 23 ಮಂದಿ ಲಘು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.