ನವದೆಹಲಿ : ಸ್ಥಾಪನಾ ದಿನವನ್ನು ಆಚರಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ 36 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.
ಇಡಿ ದೇಶವೇ ಬಿಜೆಪಿಯ ಮೇಲೆ ಭರವಸೆ, ವಿಶ್ವಾಸವನ್ನು ಇರಿಸಿದೆ. ಆದುದರಿಂದ ದೇಶದ ಜನರ ಕನಸುಗಳನ್ನು ನನಸು ಮಾಡುವುದಕ್ಕೆ, ಅವರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ಇದೊಂದು ಅವಕಾಶವೆಂದು ನಾವು ತಿಳಿಯಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ದೇಶದ ಹಲವು ರಾಜ್ಯಗಳಲ್ಲಿ ಅತ್ಯುತ್ಸಾಹ ಹಾಗೂ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ಬಗ್ಗೆ ಬಿಜೆಪಿಗೆ ಹೆಮ್ಮೆ ಇದೆ. ಎಲ್ಲೆಲ್ಲ ಬಿಜೆಪಿ ಸರಕಾರ ರಚಿಸಿದೆಯೋ ಅಲ್ಲೆಲ್ಲ ಬಿಜೆಪಿ ಸರಕಾರ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಜನಸೇವೆ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಸ್ಥಾಪನಾ ದಿನಾಚರಣೆ ಪ್ರಯುಕ್ತವಾಗಿ ಬಿಜೆಪಿಯ ರಾಜ್ಯ ಘಟಕಗಳು ಸಭೆ ಸಮಾರಂಗಳನ್ನು ನಡೆಸಲಿವೆ. 1980ರಲ್ಲಿ ಈ ದಿನದಂದು ಬಿಜೆಪಿಯು ಪ್ರತ್ಯೇಕ ಪಕ್ಷವಾಗಿ ಅಸ್ತಿತ್ವಕ್ಕೆ ಬಂದಿತ್ತು.