ಜಿನೇವಾ : ಸ್ವಿಜರ್ಲೆಂಡ್ ನಲ್ಲಿ ಕಪ್ಪು ಹಣದ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಮೂಲಕ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಮೋದಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.
ಸ್ವಿಜರ್ಲೆಂಡ್ನ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ಬಯಲೆಗೆಳೆಯುವ ನಿಟ್ಟಿನಲ್ಲಿ ಸಹಕಾರ ವೃದ್ಧಿಸಲು ಉಭಯ ದೇಶಗಳೂ ಸಹಮತ ವ್ಯಕ್ತಪಡಿಸಿವೆ. ಕಪ್ಪು ಹಣದ ಮಾಹಿತಿ ಬಗ್ಗೆ ರ್ಚಚಿಸಲು ಅಂತಾರಾಷ್ಟ್ರೀಯ ಹಣಕಾಸು ವಿಚಾರದ ರಾಷ್ಟ್ರೀಯ ಕಾರ್ಯದರ್ಶಿಯನ್ನು ಜೂನ್ 14ಕ್ಕೆ ದೆಹಲಿಗೆ ಕಳುಹಿಸುವುದಾಗಿ ಸ್ವಿಜರ್ಲೆಂಡ್ ಅಧ್ಯಕ್ಷ ಜೋಹಾನ್ ಶ್ನಿಡರ್ ತಿಳಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ದೇಶಗಳಿಗೆ ಕಪ್ಪು ಹಣದ ನಿಯಂತ್ರಣ ಹಾಗೂ ತೆರಿಗೆ ವಂಚನೆ ತಪ್ಪಿಸುವುದು ಒಂದು ಸವಾಲಾಗಿದೆ ಎಂದರು.
ಕಪ್ಪು ಹಣಕ್ಕೆ ಕಡಿವಾಣ ಹಾಗೂ ತೆರಿಗೆ ವಂಚನೆಯನ್ನು ನಿಗ್ರಹಿಸುವುದು ನಮಗೆ ಅತ್ಯಂತ ಮಹತ್ವದ ವಿಚಾರ. ಕ್ಷಿಪ್ರಗತಿಯಲ್ಲಿ ಮಾಹಿತಿ ಹಂಚಿಕೆ ವಿಚಾರವಾಗಿ ಎರಡು ರಾಷ್ಟ್ರಗಳು ಒಪ್ಪಂದ ಮಾಡಿಕೊಳ್ಳಲು ಸಮ್ಮತಿಸಿದ್ದು, ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.