ನವದೆಹಲಿ : ನಕಲಿ ಸ್ವಯಂ ಘೋಷಿತ ಗೋರಕ್ಷಕರು ಹಾಗೂ ಗೋ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.
ಮೈ ಗವ್ ವೆಬ್‌ಸೈಟ್ ಹಾಗೂ ಆ್ಯಪ್‌ಗೆ 2 ವರ್ಷ ವರ್ಷ ಸಂದ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿ ನಡೆದ ಟೌನ್‌ಹಾಲ್ ಮಾದರಿ ಕ್ರಮ&id=19722'>ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಕಲಿ ಗೋರಕ್ಷಕರ ವಿರುದ್ಧ ವಾಗ್ಧಾಳಿ ನಡೆಸಿದರು.
ಸ್ವಯಂಘೋಷಿತ ಗೋರಕ್ಷಕರು ರಾತ್ರಿ ಅಪರಾಧ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಬೆಳಗ್ಗೆ ಗೋ ರಕ್ಷಣೆಗೆ ಮುಖವಾಡ ಹೊತ್ತು ಸೇವೆ ಮಾಡುತ್ತಾರೆ. ಸೇವೆ ಮಾಡುವುದು ಈ ರೀತಿಯಲ್ಲ. ಹತ್ಯೆಗಳಿಂದ ಗೋವುಗಳು ಹೆಚ್ಚಾಗಿ ಸಾವನ್ನಪ್ಪುವುದಿಲ್ಲ. ಆದರೆ, ಅವುಗಳು ಬಹುತೇಕವಾಗಿ ಪ್ಲಾಸ್ಟಿಕ್‌ಗಳನ್ನು ತಿಂದು ಮೃತಪಡುತ್ತಿವೆ. ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಗೋರಕ್ಷಕರು ತಡೆಯುವ ಕೆಲಸ ಮಾಡಿದರೇ ಅದೇ ನಿಜವಾದ ಸೇವೆ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ನಾನೊಮ್ಮೆ ಗೋವುಗಳಿಗಾಗಿ ಆರೋಗ್ಯ ಶಿಬಿರ ಆಯೋಜಿಸಿದ್ದಾಗ ಆಕಳೊಂದರ ಹೊಟ್ಟೆಯಲ್ಲಿ 2 ಬಕೆಟ್ ಪ್ಲಾಸ್ಟಿಕ್ ತ್ಯಾಜ್ಯ ಪತ್ತೆಯಾಗಿತ್ತು ಎಂದವರು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಗೋ ಮುಖವಾಡ ಹೊತ್ತಿರುವ ರಕ್ಷಕರಲ್ಲಿ ಶೇ.80 ಮಂದಿ ಬಹುತೇಕವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇಂತಹ ನಕಲಿ ಗೋರಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ರಾಜ್ಯ ಸರ್ಕಾರಗಳಿಗೆ ಕರೆ ನಿಡಿದರು.