ಹೈದ್ರಾಬಾದ್ : ಹುಡ್ ಹುಡ್ ಚಂಡಮಾರುತದಿಂದ ತತ್ತರಗೊಂಡಿದ್ದ ಆಂಧ್ರಪ್ರದೆಶಕ್ಕೆ 1 ಸಾವಿರ ಕೋಟಿ ತುರ್ತು ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ದೇಶಾದ್ಯಂತ ಆತಂಕ ಸೃಷ್ಟಿಸುವ ಮೂಲಕ ಆಂಧ್ರಪ್ರದೇಶಕ್ಕೆ ಅಬ್ಬರಿಸಿದ್ದ ಹುಡ್ ಹುಡ್ ಹುಡ್ ಚಂಡಮಾರುತ ಅಪಾರ ನಷ್ಟ ಉಂಟುಮಾಡಿತ್ತು. ಚಂಡಮಾರುತ ಪೀಡಿತ ವಿಶಾಖಪಟ್ಟಣಂಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮೊದಲು ರಸ್ತೆ ಮಾರ್ಗವಾಗಿ ಪರಿಶೀಲನೆ ನಡೆಸಿದರು.
ಬಳಿಕ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ಕೇಂದ್ರ ಸರ್ಕಾರದಿಂದ ತುರ್ತು ಪರಿಹಾರವಾಗಿ 1 ಸಾವಿರ ಕೋಟಿ ರೂ ಘೋಷಣೆ ಮಾಡಿದರು. ಅಗತ್ಯಬಿದ್ದರೆ ಇನ್ನಷ್ಟು ನೆರವು ನೀಡುವುದಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಭರವಸೆ ನೀಡಿದರು.
ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುವರೆಗೂ ಕೇಂದ್ರ ಸರ್ಕಾರ ಎಲ್ಲಾರೀತಿಯ ಸಹಕಾರವನ್ನು ನೀಡಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂಜಾಗೃತಾ ಕ್ರಮದಿಂದ ಹಾಗೂ ತಾಂತ್ರಿಕ ಸಹಕಾರದಿಂದ ತೀರ ಪ್ರದೇಶದ ಜನರನ್ನು ಸುರಕ್ಷಿತ ಪ್ರದೆಶಕ್ಕೆ ಸ್ಥಳಾಂತರಿಸಿದ್ದರಿಉಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿಸಿದ ಪ್ರಧಾನಿ ಮೋದಿ, ವಿಶಾಖಪಟ್ಟಣಂನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅಭಯ ನೀಡಿದರು.