ಗುವಾಹಟಿ : ರೈಲ್ವೆ ನಿಲ್ದಾಣಗಳಿಗೆ ಹೊಸ ರೂಪ ಕೊಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರೈಲು ನಿಲ್ದಾಣಗಳನ್ನೇ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ 10ರಿಂದ 12 ರೈಲು ನಿಲ್ದಾಣಗಳನ್ನು ಖಾಸಗೀಕರಣ ಮಾಡಲಾಗುತ್ತದೆ. ನಿಲ್ದಾಣಗಳು ಏರ್ಪೋರ್ಟ್ಗಳಿಗಿಂತ ಉತ್ತಮವಾಗಿರಬೇಕು. ರೈಲುಗಳು ವಾಣಿಜ್ಯ ಕಟ್ಟಡಗಳ ಕೆಳಗೆ ಚಲಿಸುತ್ತಿರುವಂತಿರಬೇಕು ಎಂದು ಅವರು ತಿಳಿಸಿದ್ದಾರೆ.
ಮೇಘಾಲಯವನ್ನು ದೇಶದ ರೈಲ್ವೆ ಜಾಲದೊಂದಿಗೆ ಇದೇ ಮೊದಲ ಬಾರಿ ಬೆಸೆಯುವ ಮೆಂಡಿಪಥಾರ್-ಗುವಾಹಟಿ ನಡುವಿನ ಪ್ರಥಮ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈಲ್ವೆ ಸೌಲಭ್ಯಗಳು 100 ವರ್ಷಗಳ ಹಿಂದೆ ಹೇಗಿದ್ದವೂ ಈಗಲೂ ಹಾಗೆಯೇ ಇವೆ. ಹೀಗಾಗಿ ರೈಲ್ವೆ ನಿಲ್ದಾಣ ಖಾಸಗೀಕರಣಗೊಳಿಸಲಾಗುತ್ತದೆ ಎಂದರು.