ನವದೆಹಲಿ : ಮ್ಯಾಗಿ ನೂಡಲ್ಸ್ ಬಗ್ಗೆ ದೇಶಾದ್ಯಂತ ಉಂಟಾಗಿರುವ ಗೊಂದಲ, ವಿವಾದದ ಹಿನ್ನಲೆಯಲ್ಲಿ ನೆಸ್ಲೆ ಕಂಪನಿ ಭಾರತದಲ್ಲಿ ಮ್ಯಾಗಿ ನೂಡಲ್ಸ್ ಸರಕನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ನೆಸ್ಲೆ ಕಂಪನಿ ಜಾಗತಿಕ ಸಿಇಒ ಪೌಲ್ ಬುಲ್ಕೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮ್ಯಾಗಿ ನ್ಯೂಡಲ್ಸ್ ಬಗ್ಗೆ ಇತ್ತೀಚೆಗಿಗ ಬೆಳವಣಿಗೆಯಿಂದ ಗ್ರಾಹಕರಲ್ಲಿ ತೀವ್ರ ಗೊಂದಲ ಮೂಡಿದೆ. ನಮಗೆ ಗ್ರಾಹಕರ ಹಿತರಕ್ಷಣೆಯೇ ಮುಖ್ಯ. ಹಾಗಾಗಿ ಭಾರತದಲ್ಲಿ ಮ್ಯಾಗಿ ನ್ಯೂಡಲ್ಸ್ ಸರಕನ್ನು ವಾಪಸ್ ಪಡೆಯಲು ನೆಸ್ಲೆ ಕಂಪನಿ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಆದರೆ ಇವೆಲ್ಲಾ ಗೊಂದಲ ಬಗೆಹರಿದ ನಂತರ ಮತ್ತೆ ಮಾರುಕಟ್ಟೆಗೆ ವಾಪಸ್ ಆಗುವುದಾಗಿ ನೆಸ್ಲೆ ಕಂಪನಿ ಹೇಳಿದೆ.
ಸದ್ಯದ ಪರಿಸ್ಥಿತಿ ಸುಧಾರಣೆಗೊಂಡ ಬಳಿಕ ಮ್ಯಾಗಿ ನ್ಯೂಡಲ್ಸ್ ಮತ್ತೆ ಭಾರತದ ಮಾರುಕಟ್ಟೆಗೆ ಬರಲಿದೆ ಎಂಬುದಾಗಿ ನಾವು ನಿಮಗೆ ಭರವಸೆ ನೀಡುತ್ತೇವೆ. ಇದೊಂದು ದುರಾದೃಷ್ಟ, ಸೀಸ ಮತ್ತು ಗ್ಲುಟಮೇಟ್ ಮೋನೋಸೋಡಿಯಂ ಅಂಶ ಹೆಚ್ಚಿದೆ ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿದೆ. ಹಾಗಾಗಿ ಮಾರುಕಟ್ಟೆಯಲ್ಲಿರುವ ಮ್ಯಾಗಿ ನ್ಯೂಡಲ್ಸ್ ಸರಕನ್ನು ವಾಪಸ್ ಪಡೆಯಲು ನಾವು ನಿರ್ಧರಿಸಿದ್ದೇವೆ ಎಂದು ನೆಸ್ಲೆ ಪ್ರಕಟಣೆಯಲ್ಲಿ ಹೇಳಿದೆ.
ಮ್ಯಾಗಿ ನ್ಯೂಡಲ್ಸ್ ಸಂಪೂರ್ಣ ಸುರಕ್ಷಿತ ಎಂಬುದಾಗಿ ನೆಸ್ಲೆ ವಿಶ್ವಾಸವ್ಯಕ್ತಪಡಿಸಿದೆ. ನಾವು ಕಳೆದ 30 ವರ್ಷಗಳಿಂದ ಭಾರತದಲ್ಲಿ ಮ್ಯಾಗಿ ನ್ಯೂಡಲ್ಸ್ ಮಾರಾಟದಲ್ಲಿ ವಿಶ್ವಾಸಗಳಿಸಿದ್ದೇವೆ. ನಮಗೆ ಗ್ರಾಹಕರ ವಿಶ್ವಾಸ ಮುಖ್ಯ. ಅದೇ ರೀತಿ ನಮ್ಮ ವಸ್ತುವಿನ ಸುರಕ್ಷತೆಗೆ ಮೊದಲ ಆದ್ಯತೆ ಎಂದು ವಿವರಿಸಿದೆ.
ಮ್ಯಾಗಿ ನ್ಯೂಡಲ್ಸ್ ಬಗ್ಗೆ ಇತ್ತೀಚೆಗಿಗ ಬೆಳವಣಿಗೆಯಿಂದ ಗ್ರಾಹಕರಲ್ಲಿ ತೀವ್ರ ಗೊಂದಲ ಮೂಡಿದೆ. ನಮಗೆ ಗ್ರಾಹಕರ ಹಿತರಕ್ಷಣೆಯೇ ಮುಖ್ಯ. ಹಾಗಾಗಿ ವಿವಾದದ ಹಿನ್ನೆಲೆಯಲ್ಲಿ ಭಾರತದಲ್ಲಿ ಮ್ಯಾಗಿ ನ್ಯೂಡಲ್ಸ್ ಸರಕನ್ನು ವಾಪಸ್ ಪಡೆಯಲು ನೆಸ್ಲೆ ಕಂಪನೆ ನಿರ್ಧರಿಸಿದೆ. ಆದರೆ ಇವೆಲ್ಲಾ ಗೊಂದಲ ಬಗೆಹರಿದ ನಂತರ ಮತ್ತೆ ಮಾರುಕಟ್ಟೆಗೆ ವಾಪಸ್ ಆಗುವುದಾಗಿ ನೆಸ್ಲೆ ಕಂಪನಿ ಹೇಳಿದೆ.
ನೆಸ್ಲೆ ಕಂಪನಿಯ ಅತ್ಯಂತ ಜನಪ್ರಿಯ ಸಿದ್ಧ ಆಹಾರ ಮ್ಯಾಗಿ ನ್ಯೂಡಲ್ಸ್ ಗೆ ದೆಹಲಿ ಬಳಿಕ ಗುಜರಾತ್, ತಮಿಳುನಾಡು, ಜಮ್ಮು ಕಾಶ್ಮೀರ, ಉತ್ತರಾಖಂಡ್ ಹಾಗೂ ತೆಲಂಗಾಣ ರಾಜ್ಯಗಳು ಕೂಡಾ ಪರಿಪೂರ್ಣ ನಿಷೇಧ ಹೇರಿವೆ. ನೆರೆದೇಶ ನೇಪಾಳ, ಬ್ರಿಟನ್ ಕೂಡಾ ಮ್ಯಾಗಿ ನ್ಯೂಡಲ್ಸ್ ಪರೀಕ್ಷೆಗೆ ಮುಂದಾಗಿದೆ.