ನವದೆಹಲಿ : ಮುಂಗಾರು ಅಧಿವೇಶನದ ಮೊದಲ ಎರಡೂ ದಿನ ವ್ಯಾಪಂ ಮತ್ತು ಲಲಿತ್ ಗೇಟ್ ಹಗರಣಗಳ ವಿರುದ್ದ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಆರ್ಭಟ ತಗ್ಗಿಸಲು ಬಿಜೆಪಿ ಸ್ಟಿಂಗ್ ಅಸ್ತ್ರವನ್ನು ಬಳಸಿದೆ.
ಮದ್ಯ ನೀತಿ ಬದಲಾಯಿಸಲು ಉತ್ತರಖಾಂಡ ಮುಖಮಂತ್ರಿ ಅವರ ಕಾರ್ಯದರ್ಶಿ ಅಪರಿಚಿತ ವ್ಯಕ್ತಿಯೊಂದಿಗೆ ಸಮಾಲೋಚನೆ ನಡೆಸುತ್ತಿರುವ ವಿಡಿಯೋವನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ.
ಲಲಿತ್ ಮೋದಿ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಸುಂಧರಾ ರಾಜೆ ಮತ್ತು ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಗೆ ಬಿಜೆಪಿ ಸ್ಟಿಂಗ್ ಅಸ್ತ್ರ ಬಳಸ್ ತಿರುಗಿಬಿದ್ದಿದೆ. ಬಿಜೆಪಿಯ ಈ ದಾಳಿಯನ್ನು ತಣ್ಣಗಾಗಿಸಲು ಉತ್ತರಖಾಂಡದ ಮುಖ್ಯಮಂತ್ರಿ ಹರೀಶ್ ರಾವತ್ ತಕ್ಷಣ ತಮ್ಮ ಕಾರ್ಯದರ್ಶಿಯನ್ನು ಅಮಾನತುಗೊಳಿಸಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಸುಂಧರಾ ರಾಜೆ ಮತ್ತು ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಅನ್ನು ಉಳಿದ ಪಕ್ಷಗಳಾದ ಬಿ ಎಸ್ ಪಿ, ಜೆಡಿ(ಯು) ಕೂಡಾ ಬೆಂಬಲಿಸುತ್ತಿವೆ.