Untitled Document
Sign Up | Login    
Dynamic website and Portals
  
August 21, 2015

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ತೈಲ ಬೆಲೆ

ಸಿಂಗಪುರ : ಜಾಗತಿಕ ಮಟ್ಟದಲ್ಲಿ ಕಛ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತ ಮುಂದುವರಿದಿದೆ.

1986 ರಿಂದ ಇದೇ ಪ್ರಥಮ ಬಾರಿಗೆ ಒಂದೇ ವಾರದಲ್ಲಿ ಅತಿ ಹೆಚ್ಚು ಬೆಲೆ ಕುಸಿತ ಕಂಡಿದ್ದು, ಚೀನಾದ ಉತ್ಪಾದಕಾ ಚಟುವಟಿಕೆಯಲ್ಲಿ ಕಂದುಬರುತ್ತಿರುವ ಹಿನ್ನಡೆ ಮತ್ತು ಅಮೆರಿಕದಲ್ಲಿ ಹೆಚ್ಚುತ್ತಿರುವ ತೈಲ ಉತ್ಪಾದನೆ ಇದಕ್ಕೆ ಕಾರಣ ಎನ್ನಲಾಗಿದೆ.

ಕಳೆದ ಆರೂವರೆ ವರ್ಷಗಳಲ್ಲಿ ಚೀನಾದ ಸರಕು ಉತ್ಪಾದನೆಯಲ್ಲಿ ಕ್ಷಿಪ್ರವಾಗಿ ಇಳಿಕೆಯಾಗುತ್ತಿದೆ. ಚೀನಾದ ಉತ್ಪಾದನೆಗಳಿಗೆ ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಪ್ರಪಂಚದ ಎರಡನೇ ದೊಡ್ಡ ತೈಲ ಗ್ರಾಹಕ ದೇಶವಾದ ಚೀನಾದಿಂದ ಕಚ್ಚಾ ತೈಲಕ್ಕೆ ಬೇಡಿಕೆ ಇಳಿಮುಖವಾಗುತ್ತಿದೆ.

ಅಮೆರಿಕದ ಮಾರುಕಟ್ಟೆಯಲ್ಲೂ ಸತತ ಎಂಟು ವಾರಗಳಿಂದ ತೈಲ ಬೆಲೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

1985ರಲ್ಲಿ ಕಚ್ಚಾ ತೈಲ ಬ್ಯಾರೆಲ್ ಒಂದಕ್ಕೆ ಐದು ತಿಂಗಳುಗಳಲ್ಲಿ 30ಡಾಲರ್ ನಿಂದ 10ಡಾಲರ್ ಗೆ ಕುಸಿದಿತ್ತು. ತೈಲ ಉತ್ಪಾದಕಾ ದೇಶಗಳ ಒಕ್ಕೂಟ 'ಒಪೆಕ್' ತೈಲ ಉತ್ಪಾದನೆಯನ್ನು ಹೆಚ್ಚಿಸಿದ್ದ್ ಇದಕ್ಕೆ ಕಾರಣ.

ಗುರುವಾರ ಅಮೆರಿಕದ ಬೆಂಚ್ ಮಾರ್ಕ್ ಬೆಲೆ ಬ್ಯಾರೆಲ್ ಒಂದಕ್ಕೆ 40.21ಡಾಲರ್ ಗೆ ಕುಸಿದಿದೆ.

ಈ ಮಧ್ಯೆ ಅಮೆರಿಕದ ಆಂತರಿಕ ತೈಲ ಸಂಗ್ರಹದಲ್ಲೂ ಗಣನೀಯ ಹೆಚ್ಚಳವಾಗಿದ್ದು ಬೆಲೆ ಕುಸಿತಕ್ಕೆ ಇದೂ ಒಂದು ಕಾರಣವೆನ್ನಲಾಗಿದೆ.

ಕುಸಿಯುತ್ತಿರುವ ತೈಲ ಬೆಲೆ ಭಾರತಕ್ಕಂತೂ ವರವಾಗಿ ಪರಿಣಮಿಸಿದೆ. 70-80 ಬಿಲಿಯನ್ ಡಾಲರ್ ವಾರ್ಷಿಕ ತೈಲ ಆಮದು ಮಾಡುತ್ತಿರುವ ಭಾರತಕ್ಕೆ ಬೆಲೆ ಕುಸಿತದಿಂದಾಗಿ ಅಮೂಲ್ಯವಾದ ವಿದೇಶಿ ಹಣ ಉಳಿತಾಯವಾಗುತ್ತಿದೆ. ಇದು ವಿತ್ತ ಕೊರತೆಯನ್ನು ಕಡಿಮೆಗೊಳಿಸಲು ಹಾಗೂ ಮೂಲ ಸೌಕರ್ಯ ಯೋಜನೆಗಳಿಗೆ ಹಣ ಒದಗಿಸಲು ಸಹಾಯಕವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited