Untitled Document
Sign Up | Login    
Dynamic website and Portals
  
August 27, 2015

ಕೇಂದ್ರದಿಂದ 98 ಸ್ಮಾರ್ಟ್ ಸಿಟಿ ಅಧಿಕೃತ ಘೋಷಣೆ: ಕರ್ನಾಟಕಕ್ಕೆ 6 ಸ್ಮಾರ್ಟ್ ಸಿಟಿ

ಕೇಂದ್ರದಿಂದ 98 ಸ್ಮಾರ್ಟ್ ಸಿಟಿ ಅಧಿಕೃತ ಘೋಷಣೆ:  ಕರ್ನಾಟಕಕ್ಕೆ 6 ಸ್ಮಾರ್ಟ್ ಸಿಟಿ

ನವದೆಹಲಿ : ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದೇಶದ 98 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅಧಿಕೃತವಾಗಿ ಪ್ರಕಟಿಸಿರುವ ಪಟ್ಟಿಯಲ್ಲಿ ಕರ್ನಾಟಕ 6 ನಗರಗಳು ಸೇರಿವೆ.

ಉತ್ತರಪ್ರದೇಶದ -13, ತಮಿಳುನಾಡಿನ - 12, ಮಹಾರಾಷ್ಟ್ರದ 10, ಮಧ್ಯಪ್ರದೇಶದ 7, ಗುಜರಾತ್ ನ - 6, ಕರ್ನಾಟಕದ - 6, ಬಿಹಾರದ - 3 ಮತ್ತು ಆಂಧ್ರಪ್ರದೇಶದ 3 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿವೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಿನ 5-6 ವರ್ಷಗಳಲ್ಲಿ ಈ ಯೋಜನೆಗೆ 3 ಲಕ್ಷ ಕೋಟಿ ರೂ ಖರ್ಚು ಮಾಡಲಿದೆ.

98 ಸ್ಮಾರ್ಟ್ ಸಿಟಿಗಳಲ್ಲಿ, 24 ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳು, 18 - ಸಾಂಸ್ಕೃತಿಕ ಮತ್ತು ಪ್ರವಾಸೀ ತಾಣಗಳು, 3- ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

13 ಕೋಟಿ ಜನಸಂಖ್ಯೆ, ಅಂದರೆ ನಗರ ಜನಸಂಖ್ಯೆಯ ಶೇಕಡಾ 35 ರಷ್ಟು ಜನಸಂಖ್ಯೆ ಈ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬರುತ್ತಾರೆ. ನಗರಗಳನ್ನು ಸ್ಮಾರ್ಟ್ ಮಾಡುವುದರಿಂದ, ನಾಗರೀಕರಿಗೆ ಯೋಗ್ಯ ಜೀವನ ನೀಡುವುದರ ಜೊತೆಗೆ ಆರ್ಥಿಕವಾಗಿ ಬೆಳವಣಿಗೆ ಆಗುತ್ತದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಕರ್ನಾಟಕದ ನಗರಗಳು ಈ ಕೆಳಗಿನಂತಿವೆ:
*ಹುಬ್ಬಳ್ಳಿ-ಧಾರವಾಡ
*ಬೆಳಗಾವಿ
*ಶಿವಮೊಗ್ಗ
*ಮಂಗಳೂರು
*ದಾವಣಗೆರೆ
*ತುಮಕೂರು

ಇಟಾನಗರ, ಪಾಟ್ನಾ, ಶಿಮ್ಲಾ, ಬೆಂಗಳೂರು ಮತ್ತು ಕೋಲ್ಕತಾ ಸೇರಿದಂತೆ ದೇಶದ 9 ರಾಜಧಾನಿಗಳನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿಲ್ಲ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited