ನವದೆಹಲಿ : ದೇಶಿ ನಿರ್ಮಿತ ತೇಜಸ್ ಟ್ರೈನರ್ ಜೆಟ್ ಭಾರತದಲ್ಲಿ ಯಶಸ್ಸುಗಳಿಸಿರುವುದರಿಂದ ಶ್ರೀಲಂಕಾ ಹಾಗೂ ಈಜಿಪ್ಟ್ ತೇಜಸ್ ಟ್ರೈನರ್ ಜೆಟ್ ಗಳಿಗಾಗಿ ಬೇಡಿಕೆ ಇಟ್ಟಿವೆ. ಈ ನಿಟ್ಟಿನಲ್ಲಿ ಭಾರತ ಮೊದಲ ಬಾರಿಗೆ ಶ್ರೀಲಂಕಾ, ಈಜಿಪ್ಟ್ ನೊಂದಿಗೆ ಟ್ರೈನರ್ ಜೆಟ್ ಮಾರಾಟದ ಒಪ್ಪಂದಕ್ಕೆ ಸಹಿಹಾಕಲಿದೆ ಎಂದು ತಿಳಿದುಬಂದಿದೆ.
ತೇಜಸ್ ಯುದ್ಧ ವಿಮಾನವನ್ನು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ.
ಶ್ರೀಲಂಕಾ ವಾಯು ಪಡೆ ಚೀನಾ ನಿರ್ಮಿತ ಮಿಗ್-21 ರ ಬದಲಿಗೆ 18 -24 ಯುದ್ಧ ವಿಮಾನಗಳನ್ನು ತಯಾರಿಸಲು ಮುಂದಾಗಿದ್ದು ತೇಜಸ್ ಯುದ್ಧ ವಿಮಾನದ ಬಗ್ಗೆ ಆಸಕ್ತಿ ಹೊಂದಿದೆ, ಭಾರತಕ್ಕೆ ಈ ಒಪ್ಪಂದ ಸಿಗಲಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಶ್ರೀಲಂಕಾ ಇತ್ತೀಚೆಗಷ್ಟೆ ಚೀನಾ ಸಹಯೋಗದಲ್ಲಿ ಪಾಕಿಸ್ತಾನದ ಜೆ.ಎಫ್-17 ಯುದ್ಧ ವಿಮಾನವನ್ನು ತಿರಸ್ಕರಿಸಿತ್ತು.
ಇನ್ನು ಈಜಿಪ್ಟ್, ತೇಜಸ್ ಯುದ್ಧ ವಿಮಾನವನ್ನು ಉತ್ಪಾದಿಸಲು ಉತ್ಸಾಹ ತೋರಿದೆ.