ವಾಷಿಂಗ್ಟನ್ : ಚೀನಾವನ್ನು ಭಾರತದ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಹೌಸ್ ಫಾರಿನ್ ಅಫೇರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ನ್ಯೂಯಾರ್ಕ್ ನ ಅಮೆರಿಕ ಸಂಸದ ಎಲಿಯಟ್ ಏಂಜಲ್ ಹೇಳಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಚೀನಾವನ್ನು ನಿಯಂತ್ರಿಸಲು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಿ ಎಂದು ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಕ್ಕೆ, ಏಂಜಲ್ ಸಲಹೆ ನೀಡಿದ್ದಾರೆ.
ಏಷ್ಯಾದಲ್ಲಿ ಚೀನಾ ಪ್ರಾಬಲ್ಯ ಹೆಚ್ಚುತ್ತಿರುವುದು ಅಮೆರಿಕಾಗೆ ಆತಂಕಕಾರಿ ಬೆಳೆವಣಿಗೆಯಾಗಿದ್ದು, ಚೀನಾವನ್ನು ಭಾರತದ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ. ಕಡಲ ತೀರದ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಅರ್ಥಿಕತೆಯಾಗಿದ್ದು ಪೂರ್ವ ಏಷ್ಯಾದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಆದ್ದರಿಂದ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.