Untitled Document
Sign Up | Login    
Dynamic website and Portals
  

Related News

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ

ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ನೌಕಾಪಡೆಯ ಅಡ್ಮಿರಲ್ ಸುನೀಲ್ ಲಾಂಬಾ ,ಪಿವಿಎಸ್‌ಎಂ, ಎವಿಎಸ್‌ಎಂ, ಎಡಿಸಿ, ನೌಕಾಪಡೆ...

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಇಳಿಕೆ

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಇಳಿಕೆಯಾಗಿವೆ. ಸತತ 4ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 ರೂ. ಹಾಗೂ ಡೀಸೆಲ್...

ಪ್ರವಾಸಿ ಭಾರತೀಯ ದಿವಸ್: ರಾಷ್ಟ್ರಪತಿ, ಪ್ರಧಾನಿ ಮೋದಿ ಆಗಮನ

ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ಸಹಯೋಗದಲ್ಲಿ 2017ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮವನ್ನು ರಾಜ್ಯದ ಪ್ರವಾಸೋದ್ಯಮ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜನವರಿ 7ರಿಂದ 9ರವರೆಗೆ ತುಮಕೂರು ರಸ್ತೆಯಲ್ಲಿರುವ...

ಜಗತ್ತಿನ ಅತಿದೊಡ್ಡ ಚರಕ ಉದ್ಘಾಟನೆ ಮಾಡಿದ ಅಮಿತ್ ಶಾ

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್-3 ರಲ್ಲಿ ಪ್ರತಿಷ್ಠಾಪಿಸಿದ್ದ ಜಗತ್ತಿನ ಅತಿದೊಡ್ಡ ಚರಕವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಚರಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜನರಿಗೆ ಸ್ವಾವಲಂಬನೆ ದೊರಕಿಸಿದ ವಸ್ತುವಾಗಿದೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ...

ಯೋಗ ದೇಹ, ಬುದ್ಧಿ ಹಾಗೂ ಆತ್ಮಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ: ರಾಜನಾಥ್ ಸಿಂಗ್

ಯೋಗ ಸಕಲ ರೋಗಕ್ಕೂ ದಿವ್ಯೌಷಧ, ಇದು ಭಾರತೀಯ ಸಂಸ್ಕೃತಿಯ ಆಸ್ತಿಯಾಗಿ ಈಗ ವಿಶ್ವಕ್ಕೆ ಪರಿಚಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಲಖ್ನೌ ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,...

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಚಾಲನೆ

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಚಂಡೀಗಢದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಯೋಗ ದಿನದ ಮುಂದಾಳತ್ವವನ್ನು ಭಾರತವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಯೋಗ ಪರಲೋಕದ ವಿಜ್ಞಾನವಲ್ಲ ಇಹಲೋಕದ ಜ್ಞಾನ ಎಂದು...

ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿಎಂ ಚಾಲನೆ

ಯೋಗ ಬಲ್ಲವನಿಗೆ ರೋಗವಿಲ್ಲ ಎಂದರೂ ತಪ್ಪೇನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಗದ ಮಹತ್ವವನ್ನು ತಿಳಿಸಿದ್ದಾರೆ 2ನೇ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶ್ವಾಸಗುರು ವಚನಾನಂದ ಸ್ವಾಮಿಜಿ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ...

ಯೋಗ ದಿನಾಚರಣೆಗೆ ವಿಶ್ವ ಮಟ್ಟದಲ್ಲಿ ಸಿಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗೆ ಪ್ರಧಾನಿ ಸಂತಸ

2014ರ ಸೆಪ್ಟೆಂಬರ್​ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಪ್ರಸ್ತಾಪಿಸಿದಾಗ ವಿದೇಶಗಳಿಂದ ಇಷ್ಟು ಪ್ರಮಾಣದ ಉತ್ಸಾಹ ಕಂಡುಬರಬಹುದೆಂಬ ನಿರೀಕ್ಷೆಯಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ನವದೆಹಲಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ...

ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ. ಪೆಟ್ರೋಲ್ ಬೆಲೆ ಲೀಟರ್​ಗೆ 5 ಪೈಸೆ ,ಡೀಸೆಲ್ ಬೆಲೆ ಲೀಟರ್​ಗೆ 1.26 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಕಳೆದ ಮಾರ್ಚ್​ನಿಂದ ಪೆಟ್ರೋಲ್ ಬೆಲೆಯಲ್ಲಿ 9.04 ರೂ....

ರಾಜ್ಯಸಭೆ ಚುನಾವಣೆ: ಮತದಾನ ಆರಂಭ

ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಸಾಯಂಕಾಲ 5 ಗಂಟೆಯ ನಂತರ ಫಲಿತಾಂಶ ಹೊರಬೀಳಲಿದೆ. ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಐವರು ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ...

ಮಹಿಳಾ ಉದ್ದಿಮೆದಾರರಿಗಾಗಿ ಸರ್ಕಾರದಿಂದ ಮಹಿಳಾ ಪಾರ್ಕ್ ಸ್ಥಾಪನೆ: ಸಿಎಂ

ಮಹಿಳಾ ಉದ್ದಿಮೆದಾರರಿಗಾಗಿ ಹುಬ್ಬಳ್ಳಿ-ಧಾರವಾಡ ಹಾಗೂ ಕನಕಪುರ ತಾಲ್ಲೂಕಿನ ಹಾರೋವಳ್ಳಿಯಲ್ಲಿ `ಮಹಿಳಾ ಪಾರ್ಕ್’ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಮರ್ಜ್ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ಕೈಗಾರಿಕೋದ್ಯಮಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಾರೋವಳ್ಳಿಯಲ್ಲಿ 100 ಎಕರೆ ಜಮೀನನ್ನೂ...

ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶ

ರೈತರು ಅಹಿಂಸಾ ಸೈನಿಕರಿದ್ದಂತೆ. ಸದ್ಯ ಸರ್ಕಾರಗಳ ಯೋಜನೆಗಳು ಕಾಗದದಲ್ಲಿಯೇ ಉಳಿದಿದ್ದು, ಅನುಷ್ಠಾನಕ್ಕೆ ಬರುತ್ತಿಲ್ಲ. ಕೂಡಲೇ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಬೇಕು ಎಂದು ಮಹಾತ್ಮಾ ಗಾಂಧಿ ಮೊಮ್ಮಗಳು, ಕಸ್ತೂರ್ ಬಾ ಗಾಂಧಿ ನ್ಯಾಷನಲ್ ಸ್ಮಾರಕ ಟ್ರಸ್ಟಿ ತಾರಾಗಾಂಧಿ ಭಟ್ಟಾಚಾರ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯ...

ಇಂದು 53 ರಾಜ್ಯಸಭಾ ಸದಸ್ಯರ ನಿವೃತ್ತಿ

ಸಂಸತ್ತಿನ ಮೇಲ್ನ್ಮನೆಯ 53 ಸದಸ್ಯರು ಶುಕ್ರವಾರ ನಿವೃತ್ತಿ ಹೊಂದಲಿದ್ದಾರೆ. ಇಂದು ನಿವೃತ್ತಿ ಹೊಂದಲಿರುವ 53 ಸದಸ್ಯರಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ನ ಸದಸ್ಯರು 16. ಕಾಂಗ್ರೆಸ್ ಮೇಲ್ಮನೆಯಲ್ಲಿ ಒಟ್ಟು 53 ಸದಸ್ಯರನ್ನು ಹೊಂದಿದೆ. ಆಡಳಿತ ಪಕ್ಷವಾದ ಬಿಜೆಪಿಯ ಐವರು ಮಂತ್ರಿಗಳಾದ, ವೆಂಕಯ್ಯನಾಯ್ಡು,...

ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಶಶಾಂಕ್‌ ಮನೋಹರ್‌

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಶಶಾಂಕ್‌ ಮನೋಹರ್‌ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಹಸ್ಯ ಮತಪತ್ರಗಳ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ೫೩ ವರ್ಷದ ಶಶಾಂಕ್‌ ಮನೋಹರ್‌ ...

ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ

ಇತ್ತೀಚಿಗಷ್ಟೇ ಏರಿಕೆಯಾಗಿದ್ದ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 74 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 1.30 ರುಪಾಯಿ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ...

ಪೆಟ್ರೋಲ್, ಡೀಸೆಲ್ ದರದಲ್ಲಿ ಇನ್ನಷ್ಟು ಇಳಿಕೆ ಸಾಧ್ಯತೆ

ಇತ್ತೀಚೆಗಷ್ಟೇ 74 ಪೈಸೆಯಷ್ಟು ಇಳಿಕೆ ಕಂಡಿದ್ದ ಪೆಟ್ರೋಲ್ ದರ ಮತ್ತೆ ಇಳಿಕೆಯಾಗುವ ಮುನ್ಸೂಚನೆ ದೊರೆತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲಕ್ಕೆ ಬೇಡಿಕೆ ಕುಸಿದಿದ್ದು, ಪ್ರತಿ ನಿತ್ಯದ ಜಾಗತಿಕ ಸರಬರಾಜಿನ ಬೇಡಿಕೆಯಲ್ಲಿ 0.3 ಮಿಲಿಯನ್ ಬ್ಯಾರೆಲ್ ಕಡಿತವಾಗಿದೆ....

ದೇಶದಲ್ಲಿ ಉತ್ತಮ ಮಳೆಯಾದರೆ ಆರ್ಥಿಕ ಪ್ರಗತಿ: ಅರುಣ್ ಜೇಟ್ಲಿ

ಹವಾಮಾನ ಇಲಾಖೆ ಇತ್ತೀಚೆಗೆ ನೀಡಿರುವ ವರದಿಯಂತೆ ಈ ವರ್ಷ ಭಾರತದಲ್ಲಿ ಉತ್ತಮ ಮಳೆಯಾದರೆ ವೇಗವಾಗಿ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಉತ್ತಮ ಮಳೆ ಬಂದರೆ ದೇಶದ ರೈತರು ಚೆನ್ನಾಗಿ ಬೆಳೆ ಬೆಳೆಯಬಹುದು. ಇದರಿಂದ ನಮ್ಮ...

ಜೆ ಎನ್ ಯು ವಿವಾದಃ ರಾಹುಲ್ ಗಾಂಧಿ, ಕೇಜ್ರಿವಾಲ್ ವಿರುದ್ದ ದೇಶದ್ರೋಹದ ಪ್ರಕರಣ ದಾಖಲು

ಜೆ ಎನ್ ಯು ವಿವಾದದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ 9 ಜನರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಕೆಲ ವಕೀಲರು ನೀಡಿದ್ದ ದೂರಿನ ಆಧಾರದಲ್ಲಿ ಅಪರಾಧ ದಂಡ...

ನೇಪಾಳದ ಪರ್ವತ ಪ್ರದೇಶದಲ್ಲಿ 23 ಮಂದಿ ಪ್ರಯಾಣಿಕರಿದ್ದ ಲಘು ವಿಮಾನ ಪತನ

ನೇಪಾಳದ ಪರ್ವತ ಪ್ರದೇಶದಲ್ಲಿ 23 ಮಂದಿ ಪ್ರಯಾಣಿಕರಿದ್ದ ನಾಪತ್ತೆಯಾಗಿದ್ದ ಲಘು ವಿಮಾನದ ಅವಶೇಷ ಪತ್ತೆಯಾಗಿದ್ದು, ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ನೇಪಾಳದ ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಪೋಖ್ರಾ ವಿಮಾನ ನಿಲ್ದಾಣದಿಂದ ತಾರಾ ವಾಯುಸಂಸ್ಥೆಗೆ ಸೇರಿದ ಲಘು ವಿಮಾನ ಟೇಕ್ ಆಫ್...

ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಸುಮಾರು ಕಳೆದ 15 ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದ ತತ್ತರಿಸಿ ಹೋಗಿದ್ದ ತಮಿಳುನಾಡು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಮತ್ತೆ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿದಿರುವ ಕಾರಣ ತಮಿಳುನಾಡಿನ ಕರಾವಳಿ, ಪುದುಚೇರಿ ಸೇರಿ...

ಸಕಲ ಮಿಲಿಟರಿ ಗೌರವದೊಂದಿಗೆ ಹುತಾತ್ಮ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ ನಡೆಯಿತು. ಮಂಗಳವಾರ ಎನ್ಕೌಂಟರ್ ನಲ್ಲಿ ಮೃತಪಟ್ಟ 39 ವರ್ಷದ ಕರ್ನಲ್ ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತು ಉನ್ನತ ಸೈನ್ಯಾಧಿಕಾರಿಗಳು ಭಾಗವಹಿಸಿದ್ದರು. ಸುತ್ತಮುತ್ತಲಿನ ನೂರಾರು ಜನರು ಹುತಾತ್ಮ...

ಭಯೋತ್ಪಾದನೆ ಕೈ ಬಿಡಿ ಎಂದು ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ದಿಟ್ಟ ಹೇಳಿಕೆ

ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ದೇಶಗಳು ಭಾರಿ ಬೆಲೆ ತೆರೆಯುವಂತೆ ಮಾಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ಎದುರು ನೇರವಾಗಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಸಚಿವೆ ಸುಷ್ಮಾ ಸ್ವರಾಜ್, ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನದಲ್ಲಿ...

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ತೈಲ ಬೆಲೆ

ಜಾಗತಿಕ ಮಟ್ಟದಲ್ಲಿ ಕಛ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತ ಮುಂದುವರಿದಿದೆ. 1986 ರಿಂದ ಇದೇ ಪ್ರಥಮ ಬಾರಿಗೆ ಒಂದೇ ವಾರದಲ್ಲಿ ಅತಿ ಹೆಚ್ಚು ಬೆಲೆ ಕುಸಿತ ಕಂಡಿದ್ದು, ಚೀನಾದ ಉತ್ಪಾದಕಾ ಚಟುವಟಿಕೆಯಲ್ಲಿ ಕಂದುಬರುತ್ತಿರುವ ಹಿನ್ನಡೆ...

ಮೋದಿ ಮೋಡಿ ಸವಿಯಲು ಸಜ್ಜಾದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

ಯುಎಐ ಯಲ್ಲಿ ನೆಲೆಸಿರುವ ಭಾರತೀಯರಿಗೆ ಇಂದು ಹಬ್ಬದ ದಿನ. ತಮ್ಮ ಮೆಚ್ಚಿನ ನಾಯಕನನ್ನು ಕಣ್ಣಾರೆ ಕಾಣುವ, ಅವರ ಭಾಷಣವನ್ನು ಸವಿಯುವ ಅವಕಾಶ ಅವರಿಗೆ ಒದಗಿದೆ. ಎರಡು ದಿನಗಳ ಯು.ಎ.ಐ. ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಸೋಮವಾರ ಸಂಜೆ ದುಬೈ ನ...

ಮುಂಗಾರು ಅಧಿವೇಶನದ ಮೂರನೇ ದಿನವೂ ಪ್ರತಿಧ್ವನಿಸಿದ ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣ

ಸಂಸತ್ತಿನ ಉಭಯ ಸದನಗಳಲ್ಲೂ ಕಲಾಪಗಳನ್ನು ಗುರುವಾರ ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಲಲಿತ್ ಮೋದಿ ಪ್ರಕರಣ ಮತ್ತು ವ್ಯಾಪಂ ಹಗರಣ ಕುರಿತು ಪ್ರತಿಪಕ್ಷಗಳ ಕೋಲಾಹಲದ ಮಧ್ಯೆ ಕಲಾಪಗಳನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಯಿತು. ಮುಂಗಾರು ಅಧಿವೇಶನದ ಮೊದಲೆರಡು ದಿನಗಳೂ ಸಹ ವ್ಯರ್ಥವಾಗಿ, ಪ್ರತಿಪಕ್ಷಗಳ ಕೋಲಾಹಲದಲ್ಲಿ ಮುಂದೂಡಲ್ಪಟ್ಟಿತ್ತು. ರಾಹುಲ್ ಗಾಂಧಿ...

ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ಟರ್ಕಿ ವಿಮಾನ ತುರ್ತು ಭೂಸ್ಪರ್ಶ

ಥೈಲಾಂಡ್‌ನ‌ ಬ್ಯಾಂಕಾಕ್‌ನಿಂದ ಟರ್ಕಿ ರಾಜಧಾನಿ ಇಸ್ತಾಂಬುಲ್‌ಗೆ ತೆರಳುತ್ತಿದ್ದ ಟರ್ಕಿಶ್‌ ಏರ್‌ವೇಸ್ ನ ಏರ್ ಬಸ್ 330 ವಿಮಾನದಲ್ಲಿ ಬಾಂಬ್‌ ಇದೆಯೆಂಬ ಬೆದರಿಕೆಯ ಕಾರಣ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯಾ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಬಾಂಬ್‌ ಇದೆ...

ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ ಮಹಾ ಕುಸಿತ ಸಾಧ್ಯತೆ

ನೀತಿ-ನಿಯಮಾವಳಿಗಳನ್ನು ಬದಲಾಯಿಸುವಂತೆ ವಿಶ್ವದ ಎಲ್ಲ ಬ್ಯಾಂಕ್‌ ಗಳಿಗೆ ಕರೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ಗವರ್ನರ್ ರಘುರಾಮ್ ರಾಜನ್, ಸ್ವಲ್ಪ ಯಾಮಾರಿದರೂ ಜಾಗತಿಕ ಅರ್ಥ ವ್ಯವಸ್ಥೆ 1930ರ ದಶಕದಂತಹ ಮಹಾ ಕುಸಿತ ಕಾಣುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಲಂಡನ್ ಬಿಸಿನೆಸ್...

ಅಂತಾರಾಷ್ಟ್ರೀಯ ಯೋಗ ದಿನ: ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಯೋಗ ಪ್ರದರ್ಶನ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ, ಜೂನ್ 21 ರಂದು ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ 7 ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ತಿಳಿಸಿದರು. ಜೂನ್...

ಜೂ.19ರಂದು ಬಿಜೆಪಿಯ ಮಹತ್ವದ ಸಭೆ

ಬಿಬಿಎಂಪಿ ಚುನಾವಣೆ ಸಿದ್ಧತೆ, ಅಂತಾರಾಷ್ಟ್ರೀಯ ಯೋಗ ದಿನ ಯಶಸ್ವಿಗೊಳಿಸುವುದು, ಪಕ್ಷ ಸಂಘಟನೆ ಸೇರಿದಂತೆ ಪ್ರಮುಖ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಬಿಜೆಪಿ ಜೂ.19ರಂದು ಮಹತ್ವದ ಸಭೆ ಕರೆದಿದೆ. ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಅಂದು ದಿನಪೂರ್ತಿ ಸಭೆ ನಡೆಯಲಿದೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್‌ ಕುಮಾರ್,...

ಪೆಟ್ರೋಲ್‌ ದರ ಏರಿಕೆ, ಡೀಸೆಲ್‌ ಬೆಲೆ ಇಳಿಕೆ

ಪೆಟ್ರೋಲ್‌ ಬೆಲೆಯನ್ನು ಲೀಟರ್ ಗೆ 64 ಪೈಸೆ ಏರಿಸಲಾಗಿದೆ ಮತ್ತು ಡೀಸೆಲ್‌ ಬೆಲೆಯನ್ನು ಲೀಟರ್ ಗೆ 1.35 ರೂ. ಇಳಿಕೆ ಮಾಡಲಾಗಿದೆ. ನೂತನ ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿನ ವ್ಯತ್ಯಾಸದ ಅನ್ವಯ ಈ...

ವಿಶ್ವ ಯೋಗ ದಿನ: ವೆಬ್ ಸೈಟ್ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ವೆಬ್‌ ಸೈಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ವಿದೇಶ ವ್ಯವಹಾರಗಳ ಸಚಿವಾಲಯ ಈ ವೆಬ್‌ ಸೈಟ್‌ ನಿರ್ವಹಿಸಲಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ವಿವರ ಈ ವೆಬ್‌ ಸೈಟ್‌ ನಲ್ಲಿದೆ. ಯೋಗಾಸಾನಗಳನ್ನು ಕರಗತ ಮಾಡಿಕೊಂಡಿರುವ...

ಪ್ರಧಾನಿ ಮೋದಿ ಜತೆ ಯೋಗಕ್ಕೆ ಸೋನಿಯಾ, ರಾಹುಲ್‌, ಕೇಜ್ರಿವಾಲ್‌ ಗೆ ಆಹ್ವಾನ

ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಆಹ್ವಾನ ನೀಡಿದೆ. ಅಲ್ಲದೆ, ಸಂಸತ್ತಿನ ಎಲ್ಲಾ...

ಏರ್ ಇಂಡಿಯಾ ಸಿಬ್ಬಂದಿಗಳಿಗೆ ಯೋಗಾಭ್ಯಾಸ ಕಡ್ಡಾಯ

ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾಗೆ ಹೊಸದಾಗಿ ಆಯ್ಕೆಯಾದ ಸಿಬ್ಬಂದಿಗೆ ಯೋಗಾಭ್ಯಾಸ ಕಡ್ಡಾಯ ಮಾಡಲಾಗಿದೆ. ಸದ್ಯ ತರಬೇತಿ ಪಡೆಯುತ್ತಿರುವ ಪೈಲಟ್ ಗಳು ಮತ್ತು ವಿಮಾನ ಸಿಬ್ಬಂದಿ ಸೋಮವಾರದಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಯೋಗ ಮಾಡಲೇಬೇಕು ಎಂದು ಸೂಚಿಸಲಾಗಿದೆ....

ಪೆಟ್ರೋಲ್,ಡೀಸೆಲ್ ದರಗಳಲ್ಲಿ ಮತ್ತೊಮ್ಮೆ ಏರಿಕೆ: ಶುಕ್ರವಾರ ಮಧ್ಯರಾತ್ರಿಯಿಂದ ಜಾರಿ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆಯಾಗಿದ್ದು, ತೆರಿಗೆ ರಹಿತ ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ ರೂ.3.13 ಹಾಗೂ ಡೀಸೆಲ್ ಬೆಲೆ ಲೀಟರ್ ಒಂದಕ್ಕೆ ರೂ.2.71 ಹೆಚ್ಚಳವಾಗಲಿದೆ. ಸತತ ಎರಡನೇ ಬಾರಿ ಈ...

ಸಾವಿರ ದಿನ ಪೂರೈಸಿದ ಭಾರತ ಪರಿಕ್ರಮ ಯಾತ್ರೆ

ಗ್ರಾಮ ವಿಕಾಸದ ಧ್ಯೇಯದೊಂದಿಗೆ ಕಾಲ್ನಡಿಗೆಯ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ಆರ್.ಎಸ್.ಎಸ್‌ ಮಾಜಿ ಅಖೀಲ ಭಾರತೀಯ ಸೇವಾ ಪ್ರಮುಖ್‌ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆ ಇದೀಗ ಒಂದು ಸಾವಿರ ದಿನಕ್ಕೆ ಪ್ರವೇಶಿಸಿದೆ. 2009ರ ಆಗಸ್ಟ್‌ 9ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆಯು ಕರ್ನಾಟಕ...

ದರೋಡೆಕೋರರಿಂದ ರಕ್ಷಣೆ ನೀಡುವ ಹೋಮ್ ಗಾರ್ಡ್ ಉಪಕರಣ ಲೋಕಾರ್ಪಣೆ

ದರೋಡೆಕೋರರಿಂದ ಮನೆಯನ್ನು ಸಂಪೂರ್ಣವಾಗಿ ಸಂರಕ್ಷಿಸಲು ಅಭಿವೃದ್ಧಿ ಪಡಿಸಲಾಗಿರುವ ಎಲೆಕ್ಟ್ರಾನಿಕ್ ಉಪಕರಣವನ್ನು ಖ್ಯಾತ ಚಿತ್ರ ತಾರೆ ಹಾಗೂ ರಾಜ್ಯ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಅವರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಿದರು. ಈ ಉಪಕರಣ ವಾಣಿಜ್ಯ ಸ್ವರೂಪದ್ದಾದರೂ ಇದರ ಸಾಮಾಜಿಕ ಉಪಯುಕ್ತತೆ, ಶ್ರೀಸಾಮಾನ್ಯರಿಗೂ...

ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಲು ಮೋದಿ ಸರ್ಕಾರದ ನಿರ್ಧಾರ

ಭಾರತದ 'ಯೋಗ'ವನ್ನು ವಿಶ್ವಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಲು ತೀರ್ಮಾನಿಸಿದೆ. ವಿದೇಶಿ ವ್ಯಾಪಾರ ನೀತಿಯಲ್ಲಿ ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಸಿದ್ಧತೆ ನಡೆಸಲಾಗಿದೆ...

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮತ್ತೆ ಟೋಲ್ ದರ ಏರಿಕೆ

'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ಕ್ಕೆ ತೆರಳುವ ಮಾರ್ಗದಲ್ಲಿ ಟೋಲ್ ದರ ಏರಿಕೆಯಾಗಲಿದ್ದು ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ನವಯುಗ ಕಂಪನಿ, ಪ್ರತಿ ವರ್ಷ ಶೇ.10ರಷ್ಟು ಟೋಲ್ ದರ ಏರಿಕೆ ಮಾಡುವುದಾಗಿ ಮಾಡಿಕೊಂಡಿರುವ ಒಪ್ಪಂದದ ಹಿನ್ನೆಲೆಯಲ್ಲಿ...

ಕಾಶ್ಮೀರದ ಮೂಲಕ ದೇಶದೊಳಗೆ ನುಗ್ಗಿದ ನಾಲ್ವರು ಉಗ್ರರು

ಕಾಶ್ಮೀರ ಮೂಲಕ ನಾಲ್ವರು ಉಗ್ರರು ಭಾರತದೊಳಕ್ಕೆ ನುಸುಳಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಅವರು ದಾಳಿ ನಡೆಸಬಹುದು ಎಂದು ಗುಪ್ತಚರದಳ ಎಚ್ಚರಿಕೆ ನೀಡಿದೆ. ಕಳೆದ ವಾರ ಜಮ್ಮು-ಕಾಶ್ಮೀರದ ಸಾಂಬಾ ಹಾಗೂ ಕಠುವಾದಲ್ಲಿ ದಾಳಿ ನಡೆಸಿ ಪ್ರಾಣ ತೆತ್ತ ನಾಲ್ವರು ಉಗ್ರರ...

ಕೆಮ್ಮಿಗೆ ಚಿಕಿತ್ಸೆ: ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ ಕೇಜ್ರಿವಾಲ್

ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಗೆ ರಾಜ್ಯ ಸರ್ಕಾರದಿಂದ 2...

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಕಳೆದ ಆಗಸ್ಟ್‌ನಿಂದ 10 ಬಾರಿ ಇಳಿಕೆಯಾಗಿರುವ ಪೆಟ್ರೋಲ್‌ ಹಾಗೂ ಅಕ್ಟೋಬರ್ ನಿಂದ ಆರು ಬಾರಿ ಅಗ್ಗವಾಗಿರುವ ಡೀಸೆಲ್‌ ಬೆಲೆಗಳು ಏರಿಕೆ ಕಂಡಿವೆ. ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲೀಟರ್ ಪೆಟ್ರೋಲ್‌ 82 ಪೈಸೆ ಹಾಗೂ ಲೀಟರ್‌ ಡೀಸೆಲ್‌ ಬೆಲೆ 61 ಪೈಸೆಯಷ್ಟು ಹೆಚ್ಚಾಗಿದೆ....

ದೆಹಲಿ ಮುಸ್ಲಿಮರು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಬೇಕು: ಶಾಹಿ ಇಮಾಮ್ ಫತ್ವಾ

ನಾಳೆ ನಡೆಯಲಿರುವ ದೆಹಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತದಾರರು ಆಮ್ ಆದ್ಮಿ ಪಕ್ಷಕ್ಕೇ ಮತ ಚಲಾಯಿಸಬೇಕೆಂದು ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಫತ್ವಾ ಹೊರಡಿಸಿದ್ದಾರೆ. ದೆಹಲಿಯಲ್ಲಿ ಸೆಕ್ಯುಲರ್ ಸರ್ಕಾರ ರಚನೆಯಾಗಬೇಕಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರು ಆಮ್...

ನಿಶ್ಚಿತ ಸಬ್ಸಿಡಿ ದರ ನಿಗದಿಗೆ ಕೇಂದ್ರ ಸರ್ಕಾರ ಚಿಂತನೆ

ಕೇಂದ್ರ ಸರ್ಕಾರ ಸಿಲಿಂಡರ್ ಖರೀದಿಸಿದವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವ ಸಬ್ಸಿಡಿ ಮೊತ್ತವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಆಗಾಗ್ಗೆ ಪರಿಷ್ಕರಣೆ ಮಾಡುವುದರ ಬದಲಿಗೆ ವರ್ಷವಿಡೀ ನಿಶ್ಚಿತ ಸಬ್ಸಿಡಿ ದರ ನಿಗದಿಗೆ ಚಿಂತನೆ ನಡೆಸಿದೆ. ಈ ಕುರಿತು ಫೆ.28ರಂದು ಮಂಡನೆಯಾಗಲಿರುವ ಹಣಕಾಸು ಬಜೆಟ್‌ನಲ್ಲಿ ಅಧಿಕೃತ...

ಕೇಂದ್ರ ಸಚಿವರ ವಿದೇಶ ಪ್ರವಾಸಕ್ಕೆ ಕಡಿವಾಣ: 21ಅರ್ಜಿಗಳು ಪಿಎಂಒ ದಿಂದ ತಿರಸ್ಕೃತ

ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ 6 ತಿಂಗಳಲ್ಲಿ ಈವರೆಗೂ 12 ಕೇಂದ್ರ ಸಚಿವರು ಸಲ್ಲಿಸಿದ್ದ 21 ವಿದೇಶ ಪ್ರವಾಸದ ಪ್ರಸ್ತಾವನೆಯನ್ನು ಪ್ರಧಾನಿ ಕಾರ್ಯಾಲಯ ತಿರಸ್ಕರಿಸಿದೆ. ಮಾಧ್ಯಮ ವರದಿ ಪ್ರಕಾರ, ಪ್ರಧಾನಿ ಕಾರ್ಯಾಲಯ 9 ಅರ್ಜಿಗಳನ್ನು ತಿರಸ್ಕರಿಸಿದ್ದರೆ,...

2015-16ನೇ ಸಾಲಿನಲ್ಲಿ ಜಿಡಿಪಿ ಏರಿಕೆಯಾಗುವ ನಿರೀಕ್ಷೆ ಇದೆ: ಅರುಣ್ ಜೇಟ್ಲಿ

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಚೇತರಿಕೆಯಾಗಲಿರುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಕಳೆದ 2 ವರ್ಷಗಳಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದರ ಪರಿಣಾಮ ಆರ್ಥಿಕ ಬೆಳವಣಿಗೆ...

ವಿದೇಶದಲ್ಲಿ ಕಪ್ಪು ಹಣ ಇಡುವ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನ

'ಕಪ್ಪು ಹಣ'ದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಚಿಂತಕರ ತಂಡವೊಂದು ಭಾರತದ ಕಪ್ಪು ಹಣದ ಬಗ್ಗೆ ಕುತೂಹಲಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ. ವಿದೇಶಗಳಲ್ಲಿ ಕಪ್ಪು ಹಣ ಇಡುವ ದೇಶಗಳ ಪೈಕಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಅಂತಾರಾಷ್ಟ್ರೀಯ...

ಸರ್ಕಾರದ ವಿರುದ್ಧ ಬಿಜೆಪಿ ಮಹಿಳಾ ಮೋರ್ಚ ಪ್ರತಿಭಟನೆ: ಕಾರ್ಯಕರ್ತರ ಬಂಧನ

ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚ ಕಾರ್ಯಕರ್ತರು ಡಿ.2ರಂದು ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದರು. ಟೌನ್ ಹಾಲ್ ಎದುರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ವಿಧಾನ ಪರಿಷತ್ ಸದಸ್ಯೆ...

ಜಮ್ಮು-ಕಾಶ್ಮೀರ ಗಡಿಯಲ್ಲಿ ನುಸುಳಿದ ಉಗ್ರರು: ಸೇನಾ ಸಿಬ್ಬಂದಿಯಿಂದ ಗುಂಡಿನ ದಾಳಿ

'ಜಮ್ಮು-ಕಾಶ್ಮೀರ'ದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ಗುಂಡಿನ ದಾಳಿ ನಡೆದಿದೆ. ಪ್ರತ್ಯೇಕವಾದಿ ಗೆರಿಲ್ಲಾಗಳು ಭಾರತದ ಗಡಿಯೊಳಕ್ಕೆ ಅತಿಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸ್ ಮೂಲಗಳ ಪ್ರಕಾರ, 3-4 ಜನರಿದ್ದ ಉಗ್ರರ...

ಡಬ್ಲ್ಯೂಟಿಒ ಒಪ್ಪಂದ: ಭಾರತಕ್ಕೆ ಶರಣಾದ ಒಬಾಮರಿಂದ ಮೋದಿ ಗುಣಗಾನ

ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ವ್ಯಾಪಾರ ಸೌಲಭ್ಯ ಒಪ್ಪಂದದ (ಟಿಎಫ್‌ಎ)ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಇದ್ದ ಭಿನ್ನಾಭಿಪ್ರಾಯ ಪರಿಹರಿಸಲು ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೊಂಡಾಡಿದ್ದಾರೆ. ಆಹಾರ ಭದ್ರತೆ ವಿಚಾರ ಮುಂದಿಟ್ಟ...

ನೆಹರು ಜನ್ಮದಿನಾಚರಣೆಗೆ ಪ್ರಧಾನಿ ಮೋದಿಗಿಲ್ಲ ಆಹ್ವಾನ

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ 125ನೇ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂಗ್ರೆಸ್ ಮುಂದಾಗಿದ್ದು‌, ನ.17ರಿಂದ ನವದೆಹಲಿಯಲ್ಲಿ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿಶ್ವದ 50ಕ್ಕೂ ಹೆಚ್ಚು ದೇಶಗಳ...

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಕರೆಗೆ 50 ರಾಷ್ಟ್ರಗಳ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಅವರು ಯು.ಎನ್.ಜಿ.ಎ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಗೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಜಪಾನ್, ಅಮೆರಿಕಾ, ಕೆನಡಾ, ಚೀನಾ ಸೇರಿದಂತೆ ವಿಶ್ವದ ಸುಮಾರು 50 ದೇಶಗಳು ಜೂ.21ರಂದು ವಿಶ್ವ ಯೋಗ...

ಅಧಿಕಾರಿಗಳ ದುಂದುವೆಚ್ಚಕ್ಕೆ ಮೋದಿ ಸರ್ಕಾರ ಕಡಿವಾಣ

'ಯೋಜನೇತರ ವೆಚ್ಚ'ಗಳನ್ನು ಶೇ.10ರಷ್ಟು ಕಡಿಮೆ ಮಾಡಲು ಕಠಿಣ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಸರ್ಕಾರಿ ಅಧಿಕಾರಿಗಳು ವಿದೇಶಗಳಿಗೆ ಭೇಟಿ ನೀಡುವಾಗ ಪ್ರಥಮ ದರ್ಜೆ ಪ್ರಯಾಣ ಮಾಡುವುದಕ್ಕೆ ಕಡಿವಾಣ ಹಾಕಿದೆ. 2014-15ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಶೇ.4.1ಕ್ಕೆ...

ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಉಗ್ರರಿಂದ ಬೆದರಿಕೆ ಕರೆ

'ಕೊಚ್ಚಿ' ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಗ್ರನೊಬ್ಬನಿಂದ ಬೆದರಿಕೆ ಕರೆ ಬಂದಿದ್ದು, ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ವ್ಯಕ್ತಿಯೋರ್ವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಕಳಿಸಿದ್ದು ಕೇಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಅಹಮದಾಬಾದ್-ಕೊಚ್ಚಿ...

ಬೆದರಿಕೆ ಕರೆ ಹಿನ್ನೆಲೆ: ಎಲ್ಲಾ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ ಸೂಚನೆ ರವಾನೆ

'ಕೊಚ್ಚಿ' ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಭಧ್ರತಾ ದಳ ಉನ್ನತ ಮಟ್ಟದ ಸಭೆ ನಡೆಸಿದೆ. ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಎಲ್ಲ ವಿಮಾನನಿಲ್ದಾಣಗಳಿಗೆ 'ಗರಿಷ್ಠ ಎಚ್ಚರಿಕೆ' ಸೂಚನೆಯನ್ನು ನೀಡಲಾಗಿದೆ...

ಜಮ್ಮು-ಕಾಶ್ಮೀರದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 40 ಕನ್ನಡಿಗರ ರಕ್ಷಣೆ

'ಜಮ್ಮು-ಕಾಶ್ಮೀರ'ದಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 40 ಕನ್ನಡಿಗರನ್ನು ರಕ್ಷಿಸಲಾಗಿದ್ದು ದೆಹಲಿ ಭವನಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಕಣಿವೆ ರಾಜ್ಯದಲ್ಲಿ ಮಳೆ ನಿಂತಿದ್ದರೂ ಪ್ರವಾಹ ಸ್ಥಿತಿ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಪಡೆ ನಿರತವಾಗಿದೆ. ಪ್ರವಾಹದಲ್ಲಿ ರಾಜ್ಯದ 640 ಪ್ರವಾಸಿಗರು ಸಿಲುಕಿಕೊಂಡಿದ್ದು ಈಗಾಗಲೇ 200ಕ್ಕೂ...

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್.ಡಿ.ಐ ಇಲ್ಲ: ನಿರ್ಮಲಾ ಸೀತಾರಾಮನ್

ದೇಶದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್.ಡಿ.ಐ)ಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಅಭದ್ರತೆ ಎದುರಿಸುತ್ತಿದ್ದ ಚಿಲ್ಲರೆ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಮಲ್ಟಿ ಬ್ರಾಂಡ್ ರೀಟೆಲ್ ಕ್ಷೇತ್ರದಲ್ಲಿ ಎಫ್.ಡಿ.ಐಗೆ ನಾವು ಅವಕಾಶ...

ಇಸ್ಲಾಂ ಗೆ ಮತಾಂತರವಾದರೆ ಸ್ವರ್ಗ ಪ್ರಾಪ್ತಿ: ಶ್ರೀಲಂಕಾ ಕ್ರಿಕೆಟಿಗನಿಗೆ ಪಾಕ್ ಆಟಗಾರ ಆಮಿಷ

'ಇಸ್ಲಾಂ' ಗೆ ಮತಾಂತವಾಗುವಂತೆ ಒತ್ತಾಯ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಅಂತಾರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್ ಅವರನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಪತಿಯೇ ಪೀಡಿಸುತ್ತಿದ್ದ ಘಟನೆ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟಿಗ ಶ್ರೀಲಂಕಾದ ಕ್ರಿಕೆಟ್ ಆಟಗಾರನಿಗೆ ಇಸ್ಲಾಂ ಗೆ...

ಲವ್ ಜಿಹಾದ್: ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್ ಪತಿ ಬಂಧನ

ರೈಫಲ್ ಶೂಟಿಂಗ್ ರಾಷ್ಟ್ರೀಯ ಚಾಂಪಿಯನ್ ತಾರಾ ಸಹದೇವ್ ಅವರನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ಪತಿ ರಂಜಿತ್ ಕುಮಾರ್ ಕೊಹ್ಲಿ ಅಲಿಯಾಸ್ ರಕಿಬುಲ್ ಹಸನ್‌ ನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಹಾಗೂ ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಕಿಬುಲ್ ಹಸನ್...

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: 5 ಉಗ್ರರ ಹತ್ಯೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್ ಕೌಂಟರ್ ನಲ್ಲಿ 5 ಉಗ್ರರ ಹತ್ಯೆ ಮಾಡಲಾಗಿದೆ. ಉಗ್ರರು ಹಾಗೂ ಸೇನಾ ಪಡೆಯ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸೇನಾ ಪಡೆ 5 ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇದೇ...

ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ: 8ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

'ಮುಂಬೈ'ನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮುಂಬೈ ನಿಂದ ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಂದರ್ಭದಲ್ಲಿ ಇಂಡಿಗೋ6-E 176 ವಿಮಾನದ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ವಿಮಾನದಲ್ಲಿದ್ದ...

ಭಾರತೀಯ ಮೂಲದ ಪ್ರೊಫೆಸರ್ ಗೆ ಗಣಿತ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ

ಭಾರತೀಯ ಮೂಲದ ಇಬ್ಬರು ಪ್ರೊಫೆಸರ್ ಗಳಿಗೆ ಗಣಿತ ವಿಭಾಗದಲ್ಲಿ ಜಾಗತಿಕ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪೈಕಿ ಒಬ್ಬರಿಗೆ ಗಣಿತ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ದೊರೆತಿದೆ. ಭಾರತೀಯರಾದ ಪ್ರೊ.ಮಂಜುಳ್ ಭಾರ್ಗವ ಅವರಿಗೆ ಫೀಲ್ಡ್ ಮೆಡಲ್ (ಗಣಿತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ), ಪ್ರೊ.ಸುಭಾಷ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited